22.20 ಲಕ್ಷ ಶೌಚಾಲಯ ಕಟ್ಟಿದ್ದೇವೆ, ಇನ್ನೂ 5.53 ಲಕ್ಷ ಕಟ್ಟುತ್ತೇವೆ: ಸಚಿವರು

7

22.20 ಲಕ್ಷ ಶೌಚಾಲಯ ಕಟ್ಟಿದ್ದೇವೆ, ಇನ್ನೂ 5.53 ಲಕ್ಷ ಕಟ್ಟುತ್ತೇವೆ: ಸಚಿವರು

Published:
Updated:

ಬೆಂಗಳೂರು: ‘ರಾಜ್ಯದ 20 ಜಿಲ್ಲೆಗಳು ಬಯಲು ಬಹಿರ್ದೆಸೆ ಮುಕ್ತವಾಗಿದ್ದು, ಉಳಿದ 10 ಜಿಲ್ಲೆಗಳು ಡಿಸೆಂಬರ್‌ ಅಂತ್ಯದೊಳಗೆ ಆಗಲಿವೆ’ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ವಿಧಾನಸೌಧದ ಆವರಣದಲ್ಲಿ ಗುರುವಾರ ನಡೆದ ‘ಸ್ವಚ್ಛ ಸರ್ವೇಕ್ಷಣ ಗ್ರಾಮೀಣ–2018’ ಸಮೀಕ್ಷೆಯ ಚಾಲನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

'ಈವರೆಗೆ 22.20 ಲಕ್ಷ ಶೌಚಾಲಯಗಳ ನಿರ್ಮಿಸಲಾಗಿದ್ದು, 5.53 ಲಕ್ಷ ಬಾಕಿ ಇವೆ. ಇವುಗಳನ್ನು ಅಕ್ಟೋಬರ್‌ 2ರೊಳಗೆ ನಿರ್ಮಿಸಲು ಯೋಜಿಸಿದ್ದೇವೆ. ಒಂದು ವೇಳೆ ಸಾಧ್ಯವಾಗದಿದ್ದರೆ ವರ್ಷಾಂತ್ಯದೊಳಗೆ ಎಲ್ಲವೂ ನಿರ್ಮಾಣವಾಗಲಿವೆ’ ಎಂದರು.

‘ಹಳ್ಳಿಗಳು ಸಹ ಮಿನಿ ಬೆಂಗಳೂರು ಆಗುವ ಹಾದಿಯಲ್ಲಿವೆ. ಎಲ್ಲೆಂದರಲ್ಲಿ ಕಸ ಎಸೆಯುವ ಪರಿಪಾಠ ಹೆಚ್ಚಾಗಿದೆ. ತ್ಯಾಜ್ಯ ನಿರ್ವಹಣೆ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತದೆ’ ಎಂದರು.

ಉಪಮುಖ್ಯಮಂತ್ರಿ ಜಿ.ಪರಮೇಶ್ವರ, ‘ವಿದೇಶಗಳಲ್ಲಿ ಸ್ವಚ್ಛತೆ ಬಗ್ಗೆ ಹೆಚ್ಚಿನ ಒತ್ತು ನೀಡಲಾಗಿದೆ. ಸ್ವಚ್ಛತೆ ವಿಷಯದಲ್ಲಿ ರಾಜ್ಯವು ದೇಶದಲ್ಲೇ ನಂಬರ್ ಒನ್ ಆಗಬೇಕು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !