ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಮೀಜಿ ನಡೆಗೆ ಟೀಕೆ

ಧರ್ಮಬೋಧನೆ ಮಾಡಲಿ, ಹಕ್ಕೊತ್ತಾಯ ಬೇಡ
Last Updated 15 ಜನವರಿ 2020, 19:26 IST
ಅಕ್ಷರ ಗಾತ್ರ

ಹುಬ್ಬಳ್ಳಿ:ಹರಿಹರದಲ್ಲಿ ನಡೆದ ‘ಹರ ಜಾತ್ರೆ’ಯಲ್ಲಿ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಗಳುಮಂಗಳವಾರ ಮುರಗೇಶ್‌ ನಿರಾಣಿ ಅವರಿಗೆ ಸಚಿವಸ್ಥಾನ ನೀಡಬೇಕು ಎಂದು ಒತ್ತಾಯಿಸಿದ್ದರ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

‘ಗುರುವಿನ ಸ್ಥಾನದಲ್ಲಿರುವವರು ಸೌಜನ್ಯದಿಂದ ಸಹಾಯ ಕೇಳಬೇಕೇ ಹೊರತು, ದರ್ಪದಿಂದ ಆದೇಶ ನೀಡಬಾರದು’ ಎಂದು ಬೆಂಗಳೂರಿನ ನಿಡುಮಾಮಿಡಿ ಮಹಾಸಂಸ್ಥಾನ ಮಠದ ಚನ್ನಮಲ್ಲವೀರಭದ್ರ ಸ್ವಾಮೀಜಿ ಹೇಳಿದರು.

ಹಾವೇರಿ ಜಿಲ್ಲೆಯ ನರಸೀಪುರದಲ್ಲಿನಿಜಶರಣ ಅಂಬಿಗರ ಚೌಡಯ್ಯನವರ 900ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಸಂಖ್ಯಾಬಲ ಮತ್ತು ಅಧಿಕಾರಬಲವಿದೆ ಎಂದು ಮಠಾಧೀಶರು ಆರು ಕೋಟಿ ಜನರ ಪ್ರತಿನಿಧಿಯಾಗಿರುವ ಬಿ.ಎಸ್.ಯಡಿಯೂರಪ್ಪ ಅವರನ್ನು ಬೆದರಿಸುವ ಕೆಲಸ ಮಾಡಬಾರದು’ ಎಂದು ಹೆಸರು ಹೇಳದೆ ವಚನಾನಂದ ಸ್ವಾಮೀಜಿ ಅವರಿಗೆ ನಿಡುಮಾಮಿಡಿಶ್ರೀ ತಿರುಗೇಟು ನೀಡಿದರು

‘ತಮ್ಮ ಸಮಾಜದ ನಾಯಕರನ್ನು ಸಚಿವರನ್ನಾಗಿ ಮಾಡಿ ಎಂದು ಬೇಡಿಕೆ ಸಲ್ಲಿಸಬಹುದೇ ವಿನಃ ಒತ್ತಡ ಹೇರುವುದು ಸಮಂಜಸವಲ್ಲ. ಸ್ವಾಮೀಜಿಗಳು, ಸಲಹೆಗಳನ್ನು ನೀಡಬೇಕು. ಸಂಪುಟ ವಿಸ್ತರಣೆ ಮುಖ್ಯಮಂತ್ರಿಯ ಪರಮಾಧಿಕಾರ’ ಎಂದು ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT