ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್ ಬೆಟ್ಟಿಂಗ್: ಒಳನೋಟ ಪ್ರತಿಕ್ರಿಯೆ

Last Updated 5 ಮೇ 2019, 19:54 IST
ಅಕ್ಷರ ಗಾತ್ರ

1. ಬೆಟ್ಟಿಂಗ್‌ ವ್ಯಸನವಾಗಿ ಸೆಳೆಯುತ್ತಿದೆ

ಜವಾಬ್ದಾರಿಗಳನ್ನು ಹೊತ್ತು ಜೀವನದ ಬಂಡಿ ತಳ್ಳಬೇಕಾದ ಸಮಯದಲ್ಲಿ ಯುವಜನರು ಬೆಟ್ಟಿಂಗ್‌ ವ್ಯಸನಿಗಳಾಗಿದ್ದಾರೆ. ಇದರಿಂದ ಜೀವನದ ಮೌಲ್ಯಗಳನ್ನು ಯುವಕರು ಮರೆಯುತ್ತಿದ್ದಾರೆ. ಸಂಪಾದನೆ ಮಾಡುವ ಹಣ ನಮ್ಮ ಸಾಮರ್ಥ್ಯ ಹೆಚ್ಚಿಸುತ್ತದೆ. ಆದರೆ ಬೆಟ್ಟಿಂಗ್‌ನಿಂದ ಬರುವ ಹಣ ಕ್ಷಣಿಕವಾಗಿದ್ದು, ಯುವಜನರನ್ನು ಸೋಮಾರಿಗಳನ್ನಾಗಿ ಮಾಡುತ್ತಿದೆ.

–ಎಂ.ರಜನಿ, ಬೆಂಗಳೂರು

2. ಕ್ರಿಕೆಟ್‌ ಮನರಂಜನೆಗಾಗಿ, ದುಡಿಮೆಗಲ್ಲ

ಇಂದಿನ ಯುವಜನರು ಕ್ರಿಕೆಟ್‌ ಪ್ರೇಮಿಗಳಾಗಿದ್ದು, ಗ್ರಾಮೀಣ ಭಾಗದಲ್ಲೂಬೆಟ್ಟಿಂಗ್ ದಂಧೆ ಹೆಚ್ಚಾಗಿ ನಡೆಯುತ್ತದೆ. ಮನೆಯಲ್ಲಿರುವ ಹಣ, ಆಭರಣ ಹಾಗೂ ಇನ್ನಿತರೆ ವಸ್ತುಗಳನ್ನು ಗಿರವಿ ಇಡುವ ಮಟ್ಟಕ್ಕೆ ತಲುಪಿದ್ದಾರೆ. ಇದರಿಂದ ದಿನಗೂಲಿಮಾಡಿ ಜೀವನ ಸಾಗಿಸುವ ಬಡ ತಂದೆ, ತಾಯಿಯರನ್ನು ಸಾಲದ ಸುಳಿಯಲ್ಲಿ ಸಿಲುಕಿಸುತ್ತಾರೆ. ಕ್ರಿಕೆಟ್ ವೀಕ್ಷಿಸಿ ಮನರಂಜನೆ ಪಡೆಯಿರಿ. ನೋಡಿ ಖುಷಿ ಪಡಿಯಿರಿ, ಬೆಟ್ಟಿಂಗ್ ಆಡಬೇಡಿ. ಕ್ರಿಕೆಟ್ ಬೆಟ್ಟಿಂಗ್ ಕಡಿವಾಣ ಹಾಕುವಂತಹ ವರದಿಗೆ ಧನ್ಯವಾದಗಳು.

–ರಾಹುಲ್ ಜಾಧವ, ಕಲಬುರ್ಗಿ

3. ಪೊಲೀಸರು ಹದ್ದಿನ ಕಣ್ಣಿಡಬೇಕು

ಕ್ರೀಡೆಯನ್ನು ಮನರಂಜನೆಯಾಗಿ ಸ್ವೀಕರಿಸದೇ ವ್ಯವಹಾರ ದೃಷ್ಟಿಯಲ್ಲಿ ಪರಿಗಣಿಸಿರುವುದು ವಿಪರ್ಯಾಸ. ಪೋಷಕರಿಗೆ ತಿಳಿಯದೇ ಗೌಪ್ಯವಾಗಿ ಬೆಟ್ಟಿಂಗ್‌ ಜಾಲದಲ್ಲಿ ಸಿಲುಕುತ್ತಾರೆ. ಇದಕ್ಕಾಗಿ ಸಾಲ ಮಾಡಿ ಕೊನೆಗೆ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ಹಂತ ತಲುಪುತ್ತಾರೆ.ಪೊಲೀಸರು ಈ ಬೆಟ್ಟಿಂಗ್‌ ಜಾಲಗಳ ಮೇಲೆ ಹದ್ದಿನ ಕಣ್ಣಿಡಬೇಕು.‌

–ಎ.ಖಾಸಿಮ್, ರಾಯಚೂರು

4. ಕಠಿಣ ಕಾನೂನು ಬೇಕು

ಬೆಟ್ಟಿಂಗ್ ಸಮಾಜಕ್ಕೆ ಅಂಟಿಕೊಂಡಿರುವ ಒಂದು ದೊಡ್ಡ ಪೆಡಂಭೂತವಾಗಿದೆ. ಇದಕ್ಕೆ ಮುಖ್ಯವಾಗಿ ಯುವಜನತೆ ಬಲಿಯಾಗುತ್ತಿದೆ. ಎಚ್ಚೆತ್ತುಕೊಂಡು, ತಡೆಯಲು ಕಠಿಣ ಕಾನೂನು ಜಾರಿ ಮಾಡಬೇಕು.

–ದೇವಿಂದ್ರಪ್ಪ ಜೋಗಿ, ಬೆಳಗಾವಿ

5. ಎಚ್ಚರಿಕೆಯ ಗಂಟೆ

ಬೆಟ್ಟಿಂಗ್ ಕಾನೂನು ಬಾಹಿರ ಚಟುವಟಿಕೆ ಎಂಬ ಅರಿವಿದ್ದರೂ ಹಣದ ಆಸೆಗೆ ಅದರ ದಾಸರಾಗಿದ್ದಾರೆ. ಬೆಟ್ಟಿಂಗ್ ಭೂತಕ್ಕೆ ಸರ್ಕಾರವೇ ಕಡಿವಾಣ ಹಾಕಬೇಕು. ಅದರ ಕರಾಳ ಮುಖವನ್ನು ವರದಿ ಕಣ್ಣಮುಂದಿಟ್ಟಿದೆ. ಮುಂದಿನ ಪೀಳಿಗೆ ಈ ಜಾಲದಲ್ಲಿ ಸಿಲುಕದಂತೆ ಮೊದಲೇ ಎಚ್ಚರವಹಿಸಬೇಕು. ಈ ವರದಿ ಬೆಟ್ಟಿಂಗ್ ಕಟ್ಟುವವರಿಗೆ ಎಚ್ಚರಿಕೆಯ ಗಂಟೆಯಾಗಿದೆ.

–ಟಿ.ಎಸ್.ಚಂದನ ಸಾತ್ವಿಕ್, ಶಂಕರಘಟ್ಟ

6. ಜಾಹೀರಾತಿನಿಂದ ಜಾಗೃತಿ

ಐಪಿಎಲ್ ವೇಳೆ ಬೆಟ್ಟಿಂಗ್ ಜಾಲದಲ್ಲಿ ಸಿಲುಕಿ ಅದೆಷ್ಟೋ ಯುವಕರು ಊರು ತೊರೆಯುತ್ತಾರೆ. ಆದರೂ ಬೆಟ್ಟಿಂಗ್‌ ಮೇಲಿನ ವ್ಯಾಮೋಹ ಕಡಿಮೆ ಆಗಿಲ್ಲ. ಕ್ರಿಕೆಟ್ ಪಂದ್ಯಗಳ ನಡುವೆ ಬೆಟ್ಟಿಂಗ್‌ನ ದುಷ್ಪರಿಣಾಮಗಳ ಬಗ್ಗೆ ಜಾಹೀರಾತುಪ್ರಸಾರ ಮಾಡಬೇಕು. ಆಗ ಕ್ರಮೇಣ ಯುವಕರ ಮನಮುಟ್ಟುವ ಸಾಧ್ಯತೆ ಇದೆ.

–ಶಶಿಕುಮಾರ್, ದೇವನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT