ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಆಶಾ ಕಾರ್ಯಕರ್ತೆಗೆ ಎಚ್‌‌ಡಿಕೆ ಸಾಂತ್ವನ

Last Updated 24 ಏಪ್ರಿಲ್ 2020, 7:09 IST
ಅಕ್ಷರ ಗಾತ್ರ

ಮೈಸೂರು:ಮಂಡ್ಯದಲ್ಲಿ ಆಶಾ ಕಾರ್ಯಕರ್ತೆ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆಮೈಸೂರಿನಲ್ಲಿ ಸಂತ್ರಸ್ತೆಯನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣ ಸಂಬಂಧ ಮಂಡ್ಯ ಜಿಲ್ಲಾಧಿಕಾರಿ,ಡಿಸಿ ವೆಂಕಟೇಶ್ ಹಾಗೂ ಹುರುಳಿ ಕ್ಯಾತನಹಳ್ಳಿ ಪಿಡಿಓ ವಿರುದ್ಧ ಕಿಡಿಕಾರಿದರು.

ಅಧಿಕಾರಿಗಳು ಸಂತ್ರಸ್ತೆಯನ್ನು ದೂರು ಕೊಡದಂತೆ ತಡೆಯಲು ಮುಂದಾಗಿದ್ದರು.ಕ್ರಮ ಜರುಗಿಸದೆ ರಾಜಿ ನಡೆಸಲು ಏಕೆ ಮುಂದಾಗಿದ್ದರು.ಇಡೀ ಪ್ರಕರಣದಲ್ಲಿ ರಾಜಕಾರಣ ಸುಳಿಯುತ್ತಿದ್ದೆ.ಸದ್ಯ ಸಂತ್ರಸ್ತೆ ಮಾನಸಿಕ ಒತ್ತಡದಿಂದ ಹೊರಗೆ ಬಂದಿಲ್ಲ.ಅವರ ಹೆಸರನ್ನು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದರು.

ಕೊರೊನಾ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಗಂಭೀರತೆ ಇಲ್ಲ ಎಂದುಆರೋಪಿಸಿದ ಕುಮಾರಸ್ವಾಮಿ,ಸರ್ಕಾರ ವಿರೋಧಪಕ್ಷಗಳನಡೆಯನ್ನು ದೌರ್ಬಲ್ಯ ಎಂದುಕೊಳ್ಳಬಾರದು.ಪದೇ ಪದೇ ಸರ್ಕಾರ ತಪ್ಪು ಮಾಡಿದರೆ ವಿರೋಧ ಪಕ್ಷವಾಗಿ ಕಠಿಣವಾಗಿ ಕೆಲಸ ಮಾಡಬೇಕಾಗುತ್ತದೆ ಎಂದುಸರ್ಕಾರಕ್ಕೆ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಕೇಂದ್ರ, ರಾಜ್ಯ ಸರ್ಕಾರಗಳ ಆದೇಶ ಕೇವಲ ಮಾತಿನಲ್ಲಿದೆ.ಕೊರೊನಾ ವಾರಿಯರ್ಸ್‌‌ಗೆ ತೊಂದರೆ ಕೊಡುವವರ ವಿರುದ್ಧ ಹೆಡೆಮುರಿ ಕಟ್ಟುತ್ತೇವೆ ಎನ್ನುವುದು ಎಲ್ಲಿಗೆಹೋಗಿದೆ.ಆಶಾ ಕಾರ್ಯಕರ್ತೆಯರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದೆ ಎಂದು ಆರೋಪಿಸಿದರು.

ಮೀನಾಕ್ಷಿ ಪ್ರಕರಣ ಸಂಬಂಧಿಸಿದ ಮ್ಯಾಜಿಸ್ಟ್ರೇಟ್ ಆದೇಶ ಧಿಕ್ಕರಿಸಲಾಗಿದೆ. ಮೇ‌3ರವರೆಗೆ ನ್ಯಾಯಾಂಗ ಬಂಧನದ ಸೂಚನೆ ನೀಡಲಾಗಿತ್ತು.ಆದರೂ ಸ್ಟೇಷನ್ ಜಾಮೀನು ಮೇಲೆ ಬಿಡುಗಡೆ ಮಾಡಿರೋದು ಸರಿಯಲ್ಲ.ಇದರಲ್ಲಿ ಸರ್ಕಾರಕ್ಕೆ ಗಂಭೀರತೆ ಇಲ್ಲ ಎನ್ನುವುದು ತೋರುತ್ತದೆ.ವಿರೋಧ ಪಕ್ಷವಾಗಿ ಇಂತಹ ಸಂದರ್ಭದಲ್ಲಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿಸಬಾರದು ಎಂದಿದ್ದೇವೆ.ಮಾಧ್ಯಮಗಳೂ ಅಭೂತಪೂರ್ವ ಬೆಂಬೆಲ ಕೊಟ್ಟಿರೋದು ಇತಿಹಾಸ.ಈ ಜಾಗದಲ್ಲಿ ನಾನು ಸಿಎಂ ಆಗಿದ್ದರೆ ಪರಿಸ್ಥಿತಿ ಊಹಿಸಲೂ ಆಗುತ್ತಿರಲಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT