ಭಾನುವಾರ, ಮೇ 9, 2021
24 °C

ರಾಯಚೂರಿನಲ್ಲಿ ಬಕ್ರೀದ್‌: ನೆರೆ ಸಂತ್ರಸ್ತರ ನೆರವಿಗಾಗಿ ದೇಣಿಗೆ ಸಂಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ನಗರದ ಈದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬದ ನಿಮಿತ್ತ ಮುಸ್ಲಿಮರು ಬುಧವಾರ ವಿಶೇಷ ಪ್ರಾರ್ಥನೆ ಸಲ್ಲಿಸಿದ ಸಂದರ್ಭದಲ್ಲಿ ಕೇರಳ, ಕೊಡಗು ನೆರೆ ಸಂತ್ರಸ್ತರಿಗಾಗಿ ದೇಣಿಗೆ ನೀಡಿದ್ದು ವಿಶೇಷವಾಗಿತ್ತು.

ಜಮಾತ್ ಇ ಇಸ್ಲಾಮಿ ಹಿಂದ್ ಸಂಘಟನೆಯ ರಾಯಚೂರು ಪ್ರತಿನಿಧಿಗಳು ದೇಣಿಗೆ ಸಂಗ್ರಹಿಸುವ ವ್ಯವಸ್ಥೆ ಮಾಡಿದ್ದರು. 'ನೆರೆ ಸಂತ್ರಸ್ತರೊಂದಿಗೆ ಈದ್ ಸಂತೋಷ‌ ಹಂಚಿಕೊಳ್ಳಿರಿ' ಎನ್ನುವ ಫಲಕ ಹಿಡಿದುಕೊಂಡಿದ್ದರು.

ಕೇರಳ, ಕೊಡಗು ನೆರೆಪೀಡಿತರಿಗೆ ನೆರವಾಗೋಣ, ನಮ್ಮ ಕೈಯಿಂದಾದ ಸಹಾಯ ಮಾಡೋಣ ಎನ್ನುವ ಕೋರಿಕೆ ಅಲ್ಲಿತ್ತು. ಪ್ರಾರ್ಥನೆ ಸಲ್ಲಿದ ಬಳಿಕ ಅನೇಕ ಜನರು ದೇಣಿಗೆ ಪೆಟ್ಟಿಗೆಗೆ ಹಣ ಹಾಕಿ ನೆರವು ನೀಡಿದರು.


ಚಾಮರಾಜನಗರ: ಬಕ್ರೀದ್ ಹಬ್ಬದ ಪ್ರಯುಕ್ತ ನಡೆದ ಸಾಮೂಹಿಕ ಪ್ರಾರ್ಥನೆಯ ವೇಳೆ ಮುಸ್ಲಿಮರು ಕೊಡಗು ಮತ್ತು ಕೇರಳದಲ್ಲಿ ನೆರೆ ಪೀಡಿತರಿಗಾಗಿ ನಿಧಿಯನ್ನು ಸಂಗ್ರಹಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು