ಶನಿವಾರ, ಫೆಬ್ರವರಿ 29, 2020
19 °C

ಮಸೀದಿಗಳಲ್ಲಿ ಮದ್ದು ಗುಂಡು ಸಂಗ್ರಹ: ವಿವಾದ ಸೃಷ್ಟಿಸಿದ ರೇಣುಕಾಚಾರ್ಯ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊನ್ನಾಳಿ: ‘ಮಸೀದಿಗಳಲ್ಲಿ ಪ್ರಾರ್ಥನೆಯ ಹೆಸರಿನಲ್ಲಿ ಮದ್ದುಗುಂಡು, ಬಂದೂಕುಗಳನ್ನು ಸಂಗ್ರಹಿಸಿ ಫತ್ವಾ ಹೊರಡಿಸುವ ಮೌಲಾಗಳೇ ನಿಮಗೆ ಎಚ್ಚರಿಕೆ’ ಎಂದು ಕಿಡಿ ಕಾರಿದ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ‘ಬನ್ನಿ ನಮ್ಮ ಮಠ, ಮಂದಿರ, ದೇವಸ್ಥಾನಗಳಿಗೆ; ಅಲ್ಲಿ ತೀರ್ಥ, ಪ್ರಸಾದ ಬಿಟ್ಟರೆ ನಿಮಗೆ ಬೇರೇನೂ ಸಿಗುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸೋಮವಾರ ಪಟ್ಟಣದ ಅಗಳ ಮೈದಾನದಲ್ಲಿ ತಾಲ್ಲೂಕು ಬಿಜೆಪಿ ಹಮ್ಮಿಕೊಂಡಿದ್ದ ಪೌರತ್ವ (ತಿದ್ದುಪಡಿ) ಕಾಯ್ದೆ ಕುರಿತು ಜಾಗೃತಿ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕಿನಲ್ಲಿ ಇನ್ನು ಮುಂದೆ ನಾನು ಕೇಸರಿಮಯ ರಾಜಕಾರಣ ಮಾಡುತ್ತೇನೆ. ನಾನು ಹಿಂದುತ್ವವನ್ನು ಪ್ರೀತಿಸುತ್ತೇನೆ. ಕಳೆದ ಮೂರು ವಿಧಾನಸಭಾ ಚುನಾವಣೆಗಳಲ್ಲಿ ನನಗೆ ಹಾಗೂ ಸಿದ್ದೇಶಣ್ಣನಿಗೆ ಕೇವಲ 500ರಿಂದ 600 ಮತಗಳನ್ನು ಮುಸ್ಲಿಮರು ನೀಡಿದ್ದಾರೆ. ಆದರೂ ಭೇದಭಾವ ಮಾಡದೇ ಮಸೀದಿಗಳಿಗೆ, ಶಾದಿ ಮಹಲ್‌ಗಳಿಗೆ ಲಕ್ಷಾಂತರ ರೂಪಾಯಿ ಅನುದಾನ ಕೊಟ್ಟಿದ್ದೇವೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ₹250 ಕೋಟಿಗೂ ಹೆಚ್ಚು ಅನುದಾನ ಕೊಟ್ಟಿದ್ದಾರೆ ಆದರೂ ನಮ್ಮನ್ನು ದೂರುವುದು ಏಕೆ’ ಎಂದು ಪ್ರಶ್ನಿಸಿದರು.

ಪೌರತ್ವ (ತಿದ್ದುಪಡಿ) ಕಾಯ್ದೆಯ ಅರ್ಥವೇ ಗೊತ್ತಿಲ್ಲದ ವಿರೋಧಿಗಳು ಬಹಿರಂಗ ಚರ್ಚೆಗೆ ಬರಬೇಕು ಎಂದು ಸವಾಲು ಹಾಕಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು