ಬಿಲ್ಡರ್‌ನಿಂದ ಅನ್ಯಾಯಕ್ಕೊಳಗಾದ ದಂಪತಿಗೆ ನ್ಯಾಯ ಒದಗಿಸಿದ ರೇರಾ

ಸೋಮವಾರ, ಮೇ 20, 2019
30 °C
ನಿಯಮ ಉಲ್ಲಂಘಿಸಿದಕ್ಕೆ ದಂಡ ಪಾವತಿಸಲು ಸೂಚನೆ

ಬಿಲ್ಡರ್‌ನಿಂದ ಅನ್ಯಾಯಕ್ಕೊಳಗಾದ ದಂಪತಿಗೆ ನ್ಯಾಯ ಒದಗಿಸಿದ ರೇರಾ

Published:
Updated:
Prajavani

ಬೆಂಗಳೂರು: ಫ್ಲ್ಯಾಟ್ ವಿಚಾರವಾಗಿ ಬಿಲ್ಡರ್ಸ್‌ ಒಬ್ಬರಿಂದ ಅನ್ಯಾಯಕ್ಕೆ ಒಳಗಾಗಿದ್ದ ದಂಪತಿಗೆ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಕರ್ನಾಟಕ (ರೇರಾ) ಎರಡು ವರ್ಷದ ಬಳಿಕ ನ್ಯಾಯವನ್ನು ಒದಗಿಸಿಕೊಟ್ಟಿದೆ.

ವೈಟ್‌ಫೀಲ್ಡ್‌ನಲ್ಲಿ ಪ್ರಗತಿಯಲ್ಲಿದ್ದ ಪ್ರಾಜೆಕ್ಟ್ ನಿಗದಿತ ಅವಧಿಯೊಳಗೆ ಮುಕ್ತಾಯವಾಗದ ಹಿನ್ನೆಲೆಯಲ್ಲಿ ಹೆಸರು ಹೇಳಲು ಇಚ್ಛಿಸದ ದಂಪತಿ ಹಣವನ್ನು ಪಾಪಸ್ ನೀಡುವಂತೆ ಬಿಲ್ಡರ್ ಬಳಿ ಮನವಿ ಮಾಡಿದ್ದರು. ರೇರಾ ನಿಯಮಗಳನ್ನು ಗಾಳಿಗೆ ತೂರಿದ ಬಿಲ್ಡರ್, ದಂಪತಿಗೆ ಬೆದರಿಕೆ ಹಾಕಿ, ಹಣ ನೀಡದೆ ಸತಾಯಿಸಿದ್ದರು.

ಇದರಿಂದ ನೊಂದ ದಂಪತಿ ರೇರಾದಲ್ಲಿ ಪ್ರಕರಣ ದಾಖಲಿಸಿದ್ದರು. ಇದೀಗ ಎರಡು ವರ್ಷದ ಬಳಿಕ ದಂಪತಿ ಪರವಾಗಿ ರೇರಾ ತೀರ್ಪು ನೀಡಿದೆ. ಅಷ್ಟೇ ಅಲ್ಲ, ತಪ್ಪು ಎಸಗಿದ್ದ ಬಿಲ್ಡರ್‌ಗೆ ಕಾನೂನಿನ ಅಡಿಯಲ್ಲಿ ದಂಡ ಹಾಕಲಾಗಿದೆ. ನಗರದಲ್ಲಿ ಈ ರೀತಿ ಬಿಲ್ಡರ್ಸ್ ವಿರುದ್ಧ ರೇರಾದಲ್ಲಿ 840 ಪ್ರಕರಣಗಳು ದಾಖಲಾಗಿದ್ದು, ಗ್ರಾಹಕರು ಪರಿಹಾರಕ್ಕಾಗಿ ಎದುರು ನೋಡುತ್ತಿದ್ದಾರೆ. ಇದೇ ವಿಚಾರವಾಗಿ 2000 ಗ್ರಾಹಕರು ಮೇ 17ಕ್ಕೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

‘ರೇರಾ ಕಾಯ್ದೆ ಪ್ರಕಾರ ಅನ್ಯಾಯಕ್ಕೆ ಒಳಪಟ್ಟ ಗ್ರಾಹಕರು ಸೂಕ್ತ ಪರಿಹಾರ ಪಡೆದುಕೊಳ್ಳಬಹುದಾಗಿದೆ. ರೇರಾ ಪ್ರಾಧಿಕಾರ ಹಾಗೂ ಜಿಲ್ಲಾ ಕಮಿಷನರ್ ನಿಯಮ ಉಲ್ಲಂಘಿಸಿದ ಬಿಲ್ಡರ್‌ಗಳಿಂದ ಪ್ರಾಪರ್ಟಿಯನ್ನು ವಶಪಡಿಸಿಕೊಳ್ಳುವ ಅವಕಾಶವಿದೆ. ಅದೇ ರೀತಿ, ಗ್ರಾಹಕರಿಗೆ ಮರುಪಾವತಿಸಬೇಕಾದ ಮೊತ್ತವನ್ನು ಕೂಡ ಬಿಲ್ಡರ್‌ಗಳಿಂದ ಪಡೆಯುವ ಅಧಿಕಾರವಿದೆ. ಆದರೆ, ಸದ್ಯ ಈ ಪ್ರಕ್ರಿಯೆ ಪರಿಣಾಮಕಾರಿಯಾಗಿ ಜಾರಿಯಾಗದಿರುವುದು ಬಿಲ್ಡರ್‌ಗಳ ಮೋಸದಾಟ ಹೆಚ್ಚಿದೆ. ನಿಯಮದಂತೆ 60 ದಿನದಲ್ಲಿ ಗ್ರಾಹಕರಿಗೆ ಬಿಲ್ಡರ್‌ಗಳು ಪರಿಹಾರ ಒದಗಿಸದಿದ್ದಲ್ಲಿ ಜಿಲ್ಲಾಧಿಕಾರಿ ಹಾಗೂ ರೇರಾ ಅಗತ್ಯ ಕ್ರಮ ಕೈಗೊಳ್ಳಬಹುದು’ ಎಂದು ರೇರಾ ಕರ್ನಾಟಕ ವಿಭಾಗದ ಸಂಚಾಲಕ ಎಂ.ಎಸ್.ಶಂಕರ್ ತಿಳಿಸಿದರು.

‘ರೇರಾ ನಿಯಮವನ್ನು ಗಾಳಿಗೆ ತೂರುವ ಬಿಲ್ಡರ್‌ಗಳ ಬಳಿ ನ್ಯಾಯ ಕೇಳಿದರೆ ಜೀವ ಬೆದರಿಕೆ ಹಾಕುತ್ತಾರೆ. ಹೀಗಾಗಿ ಬಹುತೇಕ ಮಂದಿ ನ್ಯಾಯಾಲಯದ ಮೆಟ್ಟಿಲು ಏರಲು ಹಿಂದೇಟು ಹಾಕುತ್ತಾರೆ. ರೇರಾ ಅಧಿಕಾರಿಗಳು ಕೂಡ ಆಮೆಗತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಕೂಡ ಮೋಸದ ಪ್ರಕರಣ ಹೆಚ್ಚುತ್ತಿದೆ. ಕಾಯಿದೆಯಲ್ಲಿ ಪಾರದರ್ಶಕತೆ ಕೂಡ ಮರೆಯಾಗಿದೆ’ ಎಂದು ಎರಡು ವರ್ಷದ ಬಳಿಕ ನ್ಯಾಯ ಪಡೆದ ದಂಪತಿ ಬೇಸರ ವ್ಯಕ್ತಪಡಿಸಿದ್ದಾರೆ.

ರೇರಾ ಕಾಯ್ದೆಯ ಅಂಕಿ ಅಂಶ
2484:
 ರೇರಾದಡಿ ವಿಚಾರಣೆಗೆ ಬಾಕಿ ಇರುವ ಒಟ್ಟು ಪ್ರಕರಣಗಳ ಸಂಖ್ಯೆ
828: ರೇರಾದಡಿ ತೀರ್ಪು ನೀಡಲ್ಪಟ್ಟ ಹಾಗೂ ವಿಚಾರಣೆ ನಡೆದ ಪ್ರಕರಣಗಳು
56: ಮೇಲ್ಮನವಿ ನ್ಯಾಯಮಂಡಳಿಯಲ್ಲಿ ಬಾಕಿ ಇರುವ ಪ್ರಕರಣಗಳು
14: ತೀರ್ಪು ನೀಡಲ್ಪಟ್ಟ ಹಾಗೂ ವಿಚಾರಣೆಗೆ ಒಳಪಟ್ಟ ಪ್ರಕರಣಗಳು
08: ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳು
3142: ರೇರಾ ಕಾಯ್ದೆಯಡಿ ನೋಂದಾಯಿಸಲ್ಪಟ್ಟ ಯೋಜನೆಗಳು
1069: ರೇರಾ ಕಾಯ್ದೆಯಡಿ ನೋಂದಾವಣಿಯಾಗದ ಯೋಜನೆಗಳು
918: ಪರಿಷ್ಕರಣೆಗೆ ಒಳಪಡದ ಯೋಜನೆಗಳು
3168: ನೋಂದಣಿಗೆ ಅರ್ಜಿ ಸಲ್ಲಿಸಿದ ಪ್ರಾಜೆಕ್ಟ್‌ಗಳು
2546: ರೇರಾ ಕಾಯ್ದೆಯಡಿ ದಾಖಲಾದ ದೂರುಗಳು
1719: ರೇರಾ ಕಾಯ್ದೆಯಡಿ ನೋಂದಣಿಗೆ ಮನವಿ ಸಲ್ಲಿಸಿದ ಏಜೆಂಟರು

**

ನಿಯಮ ಉಲ್ಲಂಘಿಸಿದ ಹಲವು ಬಿಲ್ಡರ್‌ಗೆ ಈಗಾಗಲೇ ದಂಡ ವಿಧಿಸಲಾಗಿದೆ. ರೇರಾ ರಾಜ್ಯದಲ್ಲಿ ಅಸ್ಥಿತ್ವಕ್ಕೆ ಬಂದು ಕೇವಲ ಎರಡು ವರ್ಷವಾಗಿದ್ದು, ತನ್ನ ಬೇರನ್ನು ಭದ್ರಪಡಿಸಿಕೊಳ್ಳುತ್ತಿದೆ. ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್‌ಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇವೆ.
–ಎಂ.ಆರ್. ಕಾಂಬ್ಳೆ, ರೇರಾ ಕರ್ನಾಟಕ ಅಧ್ಯಕ್ಷ

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !