ಆನಂದ್‌ ಸಿಂಗ್‌ ನನ್ನ ಅಣ್ಣ ಇದ್ದ ಹಾಗೆ, ಹಲ್ಲೆ ನಡೆಸಿಲ್ಲ: ಗಣೇಶ್ ಸ್ಪಷ್ಟನೆ

7

ಆನಂದ್‌ ಸಿಂಗ್‌ ನನ್ನ ಅಣ್ಣ ಇದ್ದ ಹಾಗೆ, ಹಲ್ಲೆ ನಡೆಸಿಲ್ಲ: ಗಣೇಶ್ ಸ್ಪಷ್ಟನೆ

Published:
Updated:

ರಾಮನಗರ: ‘ಆನಂದ್ ಸಿಂಗ್ ನನ್ನ ಅಣ್ಣ ಇದ್ದ ಹಾಗೆ. ಅವರ ಮೇಲೆ ನಾನು ಹಲ್ಲೆ ನಡೆಸಿಲ್ಲ’ ಎಂದು ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಸ್ಪಷ್ಟನೆ ನೀಡಿದರು. 

ಈಗಲ್ಟನ್‌ ರೆಸಾರ್ಟ್‌ನ ಹೊರಗೆ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆನಂದ್ ಸಿಂಗ್ ಮತ್ತು‌ ಭೀಮಾ ನಾಯ್ಕ‌ ನಡುವಿನ ಮನಸ್ಥಾಪ ಬಗೆಹರಿಸಲು ಮಾತುಕತೆ ನಡೆದಿತ್ತು. ಈ ಸಂದರ್ಭ ಸಣ್ಣ ಘಟನೆ ನಡೆಯಿತು. ಆದರೆ ಮಾಧ್ಯಮಗಳಲ್ಲಿ ಬಂದಿರುವಂತೆ ಬಿಯರ್ ಬಾಟಲಿಯಿಂದ ಹೊಡೆದಿಲ್ಲ. ನನ್ನ ಗನ್ ಮ್ಯಾನ್‌ಗೂ ಕಚ್ಚಿಲ್ಲ’ ಎಂದರು.‌

ಇದನ್ನೂ ಓದಿ... ‘ಆಪರೇಷನ್‌’ ಮಾಹಿತಿ ಸೋರಿಕೆಯಿಂದಾಗಿ ಹೊಯ್‌ಕೈ;ಆಸ್ಪತ್ರೆಗೆ ದಾಖಲಾದ ಆನಂದ್‌ ಸಿಂಗ್

‘ಘಟನೆಯಿಂದ ಆನಂದ್ ಕುಟುಂಬದವರಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ’ ಎಂದರು.

ಇದನ್ನೂ ಓದಿ: ಆನಂದ್‌ ಸಿಂಗ್‌ ಮೇಲೆ ಹಲ್ಲೆ; ಗುಟ್ಟು ರಟ್ಟು ಮಾಡಿದ್ದಕ್ಕೆ ಸಿಟ್ಟು

ಕಾಂಗ್ರೆಸ್ ರೆಸಾರ್ಟ್ ರಾಜಕಾರಣಕ್ಕೆ ತೆರೆ
ರಾಮನಗರದ ಈಗಲ್ಟನ್‌ ರೆಸಾರ್ಟ್‌ನಲ್ಲಿ ಕಾಂಗ್ರೆಸ್ ಶಾಸಕರ ವಾಸ್ತವ್ಯ ಅಂತ್ಯಗೊಂಡಿದ್ದು, ಒಬ್ಬೊಬ್ಬರಾಗಿ ತೆರಳುತ್ತಿದ್ದಾರೆ.

ಮಧ್ಯಾಹ್ನ 12 ಗಂಟೆ ಸುಮಾರಿಗೆ ಸಿದ್ದರಾಮಯ್ಯ ಧಾವಿಸಿದ್ದು, ಎಲ್ಲ ಶಾಸಕರು ರೆಸಾರ್ಟ್ ಬಿಟ್ಟು ಹೊರಡುವಂತೆ ಸೂಚಿಸಿದರು. ಬಳಿಕ ಒಬ್ಬೊಬ್ಬರಾಗಿ ಕಾರುಗಳಲ್ಲಿ ರೆಸಾರ್ಟ್‌ನಿಂದ ಹೊರಟರು.

‘ಇಂದು ನಡೆಯಬೇಕಿದ್ದ ಸಭೆಯು ಕಾರಣಾಂತರಗಳಿಂದ ರದ್ದಾಗಿದೆ. ಹೀಗಾಗಿ ಇಲ್ಲಿಂದ ಹೊರಟಿದ್ದೇವೆ’ ಎಂದು ಶಾಸಕ ರಾಮಲಿಂಗ ರೆಡ್ಡಿ ತಿಳಿಸಿದರು.

ಇದನ್ನೂ ಓದಿ... ‘ಇಲ್ಲ ಇಲ್ಲ, ರೆಸಾರ್ಟ್‌ನಲ್ಲಿ ಗಲಾಟೆಯಾಗಿಲ್ಲ, ಸಿದ್ದರಾಮಯ್ಯಗೆ ಕಾರ್ ಕೊಟ್ಟಿಲ್ಲ’

ಬರಹ ಇಷ್ಟವಾಯಿತೆ?

 • 7

  Happy
 • 5

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !