ರೆಸಾರ್ಟ್‌ ರಾಜಕೀಯ: ಮಧ್ಯಾಹ್ನ‌ 3ಕ್ಕೆ ಕಾಂಗ್ರೆಸ್ ಶಾಸಕರ ಸಭೆ

7

ರೆಸಾರ್ಟ್‌ ರಾಜಕೀಯ: ಮಧ್ಯಾಹ್ನ‌ 3ಕ್ಕೆ ಕಾಂಗ್ರೆಸ್ ಶಾಸಕರ ಸಭೆ

Published:
Updated:

ಬಿಡದಿ: ಈಗಲ್‌ಟನ್ ರೆಸಾರ್ಟಿನಲ್ಲಿ ಕಾಂಗ್ರೆಸ್‌ ಶಾಸಕರು ಒಟ್ಟುಗೂಡಿದ್ದು, ಶನಿವಾರ ಮಧ್ಯಾಹ್ನ 3ಕ್ಕೆ ಸಭೆ ನಿಗದಿಯಾಗಿದೆ.‌

ಸಮನ್ವಯ ಸಮಿತಿ‌ ಅಧ್ಯಕ್ಷ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಮುಖ್ಯಮಂತ್ರಿ ಎಚ್.ಡಿ.‌ ಕುಮಾರಸ್ವಾಮಿ ಸಹ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. 

'ಇನ್ನೂ ಒಂದಿಬ್ಬರು ಶಾಸಕರು ಮಧ್ಯಾಹ್ನ ಬರುತ್ತಾರೆ. ಅನಂತರ‌ ಎಲ್ಲರು ಒಟ್ಟಿಗೆ ಸೇರಿ ಸಭೆ ನಡೆಸುತ್ತೇವೆ. ಕ್ಷೇತ್ರದಲ್ಲಿ ಕಳೆದ ಏಳು ತಿಂಗಳಿಂದ ಕೆಲಸ ಆಗಿಲ್ಲ.‌ ಸಾಕಷ್ಟು ಅನುದಾನ ಸಿಕ್ಕಿಲ್ಲ ಎಂಬ ಅಸಮಾಧಾನ ಇದೆ. ಎಲ್ಲವನ್ನೂ ಹೇಳಿಕೊಳ್ಳುತ್ತೇವೆ. ಯಾರೂ ಕಾಂಗ್ರೆಸ್ ಬಿಡುವುದಿಲ್ಲ' ಎಂದು‌ ಮಾಲೂರು ಶಾಸಕ‌ ನಂಜೇಗೌಡ ಮಾಧ್ಯಮಗಳಿಗೆ ಪ್ರತಿಕ್ರಿಯೆ‌ ನೀಡಿದರು.‌ 

ಬೇರೆಯವರಿಗೆ ಅವಕಾಶ ನೀಡುವ ಸಲುವಾಗಿ‌ ರಾಜೀನಾಮೆ ನೀಡಲು‌ ನಮ್ಮ ಸಚಿವರೇ‌ ಸಿದ್ದರಿದ್ದಾರೆ.‌ ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ ' ಎಂದರು.

ತಟ್ಟೆ ಇಡ್ಲಿ ಸವಿ: ಎಲ್ಲ ಶಾಸಕರಿಗೆ ಬೆಳಿಗ್ಗೆ ಉಪಾಹಾರಕ್ಕೆ ಹೋಟೆಲ್ ನ ಖಾದ್ಯಗಳ ಜೊತೆಗೆ ಬಿಡದಿಯ ತಟ್ಟೆ ಇಡ್ಲಿಯನ್ನು ಬಡಿಸಲಾಯಿತು. ಆರು ಬಾಕ್ಸ್‌ಗಳಲ್ಲಿ ಬಿಡದಿಯಿಂದ ಇಡ್ಲಿಯನ್ನು ತರಿಸಿಕೊಳ್ಳಲಾಗಿತ್ತು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !