ಬಿಜೆಪಿಯವರು ಸೆಳೆಯದಿರಲಿ ಎಂದು ಶಾಸಕರನ್ನು ರೆಸಾರ್ಟ್‌ನಲ್ಲಿರಿಸಲಾಗಿದೆ: ದೇಶಪಾಂಡೆ

7

ಬಿಜೆಪಿಯವರು ಸೆಳೆಯದಿರಲಿ ಎಂದು ಶಾಸಕರನ್ನು ರೆಸಾರ್ಟ್‌ನಲ್ಲಿರಿಸಲಾಗಿದೆ: ದೇಶಪಾಂಡೆ

Published:
Updated:

ಹುಬ್ಬಳ್ಳಿ: ‘ಬಿಜೆಪಿಯವರು ನಮ್ಮ ಶಾಸಕರನ್ನು ಸೆಳೆಯಲು ಯತ್ನಿಸುತ್ತಿರುವುದರಿಂದ ರೆಸಾರ್ಟ್‌ನಲ್ಲಿರಿಸಲಾಗಿದೆ’ ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಶನಿವಾರ ಮಾತನಾಡಿದ ಅವರು, ನಮ್ಮ ಶಾಸಕರ ಮೇಲೆ ನಮಗೆ ಸಂಪೂರ್ಣ ವಿಶ್ವಾಸ ಇದೆ. ಆದರೆ ಬಿಜೆಪಿಯವರು ನಮ್ಮವರ ಮೇಲೆ ಒತ್ತಡ ಹೇರುತ್ತಿದ್ದಾರೆ. ನಮ್ಮವರು ನೆನ್ನೆಯಷ್ಟೇ ರೆಸಾರ್ಟ್‌ಗೆ ಹೋಗಿದ್ದಾರೆ. ಒಂದು ವಾರದಿಂದ ರೆಸಾರ್ಟ್‌ನಲ್ಲಿರುವ ಬಿಜೆಪಿಯವರಿಗೆ ಏಕೆ ಈ ಪ್ರಶ್ನೆ ಕೇಳುವುದಿಲ್ಲ ಎಂದು ಪ್ರಶ್ನಿಸಿದರು.

ಬರ ಪೀಡಿತ ಎಂದು ಘೋಷಣೆಯಾಗಿರುವ ರಾಜ್ಯದ 156 ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲು, ಪಶುಗಳಿಗೆ ಮೇವು ಒದಗಿಸಲು ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ. ಬರ ಅಧ್ಯಯನ ಮಾಡಲು ನಾಲ್ಕು ಸಂಪುಟ ಉಪ ಸಮಿತಿ ರಚಿಸಲಾಗಿದ್ದು, ಈಗಾಗಲೇ ರಾಜ್ಯದಾದ್ಯಂತ ಪ್ರವಾಸ ಮಾಡಲಾಗುತ್ತಿದೆ ಎಂದು ಹೇಳಿದರು.

ಈ ಹಿಂದೆಯೇ ಬರ ಪೀಡಿತ ಘೋಷಣೆಯಾದ ತಾಲ್ಲೂಕುಗಳಿಗೆ ಈಗಾಗಲೇ ₹1 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಇತ್ತೀಚೆಗೆ ಘೋಷಣೆಯಾದ ತಾಲ್ಲೂಕುಗಳಿಗೂ ₹50 ಲಕ್ಷ ಬಿಡುಗಡೆ ಮಾಡಲಾಗಿದೆ. ಕುರಿ ಅಭಿವೃದ್ಧಿ ನಿಗಮದಿಂದ ಸಹ ₹5 ಕೋಟಿ ಬರ ಪರಿಹಾರ ಕಾಮಗಾರಿಗೆ ನೀಡಲಾಗಿದೆ. 15 ಲಕ್ಷ ಮೇವು ಕಿಟ್ ವಿತರಿಸಲಾಗಿದೆ. ಬರ ಪೀಡಿತವಲ್ಲದ ತಾಲ್ಲೂಕುಗಳಿಗೂ ಕುಡಿಯುವ ನೀರಿಗಾಗಿ ₹15 ಲಕ್ಷ ನೀಡಲಾಗಿದೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !