ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಲಿಕುಳ | ವನ್ಯಜೀವಿ ಛಾಯಾಚಿತ್ರ ಸ್ಪರ್ಧೆ: ಮಡಿಕೇರಿ ಪ್ರಥಮ, ಮೈಸೂರು ದ್ವಿತೀಯ

ಜೈವಿಕ ಉದ್ಯಾನ ಆಯೋಜಿಸಿದ್ದ ಸ್ಪರ್ಧೆ
Last Updated 13 ಅಕ್ಟೋಬರ್ 2019, 11:18 IST
ಅಕ್ಷರ ಗಾತ್ರ

ಬಜ್ಪೆ : ಪಿಲಿಕುಳ ಜೈವಿಕ ಉದ್ಯಾನ ಮತ್ತು ಜೀವವೈವಿಧ್ಯದ ಪಾಲುದಾರ ಸಂಸ್ಥೆ ಎಂಆರ್‌ಪಿಎಲ್ ಆಯೋಜಿಸಿದ್ದ ‘ವನ್ಯಜೀವಿ ಸಪ್ತಾಹ-2019’ ಹಾಗೂ ವನ್ಯಜೀವಿ ಛಾಯಾಚಿತ್ರ ಸ್ಪರ್ಧೆಯಲ್ಲಿ ಮಡಿಕೇರಿಯ ಛಾಯಾಗ್ರಾಹಕ ವಿನೋದ್ ಪ್ರಥಮ ಬಹುಮಾನ ಗಳಿಸಿದ್ದಾರೆ.

ವಿನೋದ್ ಸೆರೆಹಿಡಿದ ‘ಮರವೊಂದರಲ್ಲಿ ನೇತಾಡುತ್ತಿರುವ ಗೂಡಿಗೆ ಗೀಜಗ ಹಕ್ಕಿಯೊಂದು ಸೇರಿಕೊಳ್ಳಲು ಪ್ರಯತ್ನಿಸುತ್ತಿರುವ ದೃಶ್ಯ ಪ್ರಥಮ ಸ್ಥಾನ ಗಳಿಸಿದೆ.

ಪಿಲಿಕುಳ ನಿಸರ್ಗಧಾಮದ ಪುಟ್ಟ ಕಾಡಿನೊಳಗೆ ‘ಒಂದು ಹುಲಿ ಮತ್ತೊಂದು ಹುಲಿಯ ಕಿವಿಹಿಂಡಿ ಎಳೆಯುತ್ತಿರುವ ಚಿನ್ನಾಟದ ದೃಶ್ಯ ಸೆರೆ ಹಿಡಿದ ಮೈಸೂರಿನ ಕರಣ್ ಸತೀಶ್ ಅವರಿಗೆ ದ್ವಿತೀಯ ಸ್ಥಾನ ಹಾಗೂ ‘ಆಹಾರಕ್ಕೆ ದೃಷ್ಟಿನೆಟ್ಟು ರೆಕ್ಕೆ ಬಿಚ್ಚಿ ಹಾರಾಡುತ್ತಿರುವ ಗಿಳಿ’ಯ ಚಿತ್ರ ಸೆರೆಹಿಡಿದ ತುಮಕೂರಿನ ವರದನಾಯಕ ಟಿ. ಪಿ. ತೃತೀಯ ಬಹುಮಾನ ಪಡೆದಿದ್ದಾರೆ.

ಈ ಛಾಯಾಚಿತ್ರಗ್ರಾಹಕರು ಸೆರೆಹಿಡಿದ ಕೆಲವು ಅದ್ಭುತ ಹಾಗೂ ಹುಬ್ಬೇರಿಸುವ ದೃಶ್ಯಗಳು ಈಗ ಪಿಲಿಕುಳ ಉದ್ಯಾನದಲ್ಲಿ ಅನಾವರಣಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT