ಭಾನುವಾರ, ಸೆಪ್ಟೆಂಬರ್ 15, 2019
30 °C

ಆರ್‌ಟಿಇ ತಿದ್ದುಪಡಿ ಸಿಂಧುತ್ವ: ರಾಜ್ಯ ಸರ್ಕಾರಕ್ಕೆ 'ಸುಪ್ರೀಂ' ನೋಟಿಸ್

Published:
Updated:

ನವದೆಹಲಿ: ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಹಕ್ಕು ಕಾಯ್ದೆ ಅಡಿ ಬಡವರಿಗೆ ಶೇ. 25ರಷ್ಟು ಸೀಟು ನೀಡದ ಕುರಿತು ಪ್ರತಿಕ್ರಿಯೆ ನೀಡುವಂತೆ ಸೂಚಿಸಿ ಸುಪ್ರೀಂ ಕೋರ್ಟ್ ಸೋಮವಾರ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಶಿಕ್ಷಣ ಹಕ್ಕು ಕಾಯ್ದೆ ತಿದ್ದುಪಡಿ ಸಿಂಧುತ್ವ ಪ್ರಶ್ನಿಸಿ ಬಿ.ಎನ್. ಯೋಗಾನಂದ ಎಂಬುವವರು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠ ಈ ನೋಟಿಸ್ ಜಾರಿ ಮಾಡಿದೆ.

ಬಡ ವಿದ್ಯಾರ್ಥಿಗಳಿಗೆ ಶೇ. ೨೫ರಷ್ಟು ಸೀಟುಗಳನ್ನು ಕಾಯ್ದಿರಿಸುವುದರಿಂದ ಖಾಸಗಿ ಮತ್ತು ಅನುದಾನರಹಿತ ಶಾಲೆಗಳನ್ನು ಕಾಯ್ದೆಯಿಂದವಹೊರಗಿರಿಸಿ  ರೂಪಿಸಲಾದ ನಿಯಮಾವಳಿಗಳ ಕುರಿತು ಪರಿಶೀಲನೆ‌ ನಡೆಸುವುದಾಗಿಯೂ ಹೇಳಿರುವ ಪೀಠ, ಕಳೆದ ಮೇ ತಿಂಗಳಲ್ಲಿ ರಾಜ್ಯ ಹೈಕೋರ್ಟ್‌ನೀಡಿರುವ ತೀರ್ಪಿಗೆ ತಡೆ ನೀಡಲು‌ ನಿರಾಕರಿಸಿತು.

ಹೈಕೋರ್ಟ್ ಆದೇಶ ಪ್ರಶ್ನಿಸಿ ಯೋಗಾನಂದ ನೇತೃತ್ವದಲ್ಲಿ ಪಾಲಕರ ಸಂಘ ಸಲ್ಲಿಸಿದ್ದ ಈ ಅರ್ಜಿಯ ಪರ ಮೀನಾಕ್ಷಿ ಅರೋರಾ ವಾದ ಮಂಡಿಸಿದರು.

Post Comments (+)