ಅಡುಗೆ ಎಣ್ಣೆ ಟ್ಯಾಂಕರ್‌ಗೆ ಲಾರಿ ಡಿಕ್ಕಿ: ಚಾಲಕ ಸಾವು, ಎಣ್ಣೆಗಾಗಿ ಮುಗಿಬಿದ್ದ ಜನ

7

ಅಡುಗೆ ಎಣ್ಣೆ ಟ್ಯಾಂಕರ್‌ಗೆ ಲಾರಿ ಡಿಕ್ಕಿ: ಚಾಲಕ ಸಾವು, ಎಣ್ಣೆಗಾಗಿ ಮುಗಿಬಿದ್ದ ಜನ

Published:
Updated:

ಬಾಗಲಕೋಟೆ: ಖಾದ್ಯತೈಲ (ಅಡುಗೆ ಎಣ್ಣೆ) ಸಾಗಣೆ ಮಾಡುತ್ತಿದ್ದ ವಾಹನ ಅಪಘಾತಕ್ಕೀಡಾಗಿ ಚಾಲಕ ಅದರಲ್ಲಿ ಸಿಕ್ಕಿಹಾಕಿಕೊಂಡು ಜೀವನ್ಮರಣ ಹೋರಾಟ ನಡೆಸುತ್ತಿದ್ದರೂ ಅದನ್ನು ಲೆಕ್ಕಿಸದೇ ಸ್ಥಳೀಯರು ಎಣ್ಣೆಗಾಗಿ ಮುಗಿಬಿದ್ದ ಘಟನೆ ಹುನಗುಂದ ಬಳಿ ಭಾನುವಾರ ನಡೆದಿದೆ.

ಇಳಕಲ್-ಹುನಗುಂದ ಮಧ್ಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಅಪಘಾತ ನಡೆದಿದ್ದು, ಎಣ್ಣೆ ತುಂಬಿಕೊಂಡು ಹೋಗುತ್ತಿದ್ದ ಟ್ಯಾಂಕರ್, ಕಂಟೇನರ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದ ಟ್ಯಾಂಕರ್ನಿಂದ ಎಣ್ಣೆ ಸೋರಲಾರಂಭಿಸಿದೆ.

ಅಪಘಾತದ ಸುದ್ದಿ ತಿಳಿಯುತ್ತಲೇ ಜನ ಬಿಂದಿಗೆ, ಬಕೇಟ್, ಕ್ಯಾನ್ ತಂದು ಎಣ್ಣೆ ತುಂಬಿಕೊಂಡು ಹೋಗಿದ್ದಾರೆ. ಆದರೆ ಕಂಟೆನರ್ ಒಳಗೆ ಚಾಲಕ ಸಿಕ್ಕಿಹಾಕಿಕೊಂಡು ನರಳುತ್ತಿದ್ದರೂ ಯಾರು ಅತ್ತ ಗಮನಹರಿಸಿಲ್ಲ. ಸ್ಥಳಕ್ಕೆ ಪೊಲೀಸರು ಬಂದು ಚಾಲಕನನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಲು ಮುಂದಾದಾಗ ಅವರು ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.

ಸರಣಿ ಅಪಘಾತಕ್ಕೆ ಹಾದಿ: ಎಣ್ಣೆ ಟ್ಯಾಂಕರ್ ಹಾಗೂ ಕಂಟೇನರ್ ನಡುವೆ ಡಿಕ್ಕಿ ಸರಣಿ ಅಪಘಾತಕ್ಕೆ ದಾರಿಯಾಯಿತು. ಬಳ್ಳಾರಿಯಿಂದ ವಿಜಯಪುರದತ್ತ ಹೊರಟಿದ್ದ ಸುಮೊ ವಾಹನ ಎಣ್ಣೆಮಯ ರಸ್ತೆಯಲ್ಲಿ ಜಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಜಾಲಿ ಕಂಟಿಗೆ ನುಗ್ಗಿ ಅದರೊಳಗೆ ಪ್ರಯಾಣಿಸುತ್ತಿದ್ದವರು ಗಾಯಗೊಂಡಿದ್ದಾರೆ. ಅದೇ ದಾರಿಯಲ್ಲಿ ಬಂದ ಏಳು ಬೈಕ್ಗಳು ಸ್ಕಿಡ್ ಆಗಿ ಸವಾರರು ಗಾಯ ಗಾಯಗೊಂಡಿದ್ದಾರೆ.

ಇಳಕಲ್ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 1

  Sad
 • 1

  Frustrated
 • 2

  Angry

Comments:

0 comments

Write the first review for this !