ಭಾನುವಾರ, ಡಿಸೆಂಬರ್ 8, 2019
21 °C

ಧಾರವಾಡ: ಬಸ್‌–ಲಾರಿ ಡಿಕ್ಕಿ, ಆರು ಮಂದಿ ಸ್ಥಳದಲ್ಲೇ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಅಣ್ಣಿಗೇರಿ ಬಳಿಯ ಕೋಳಿವದ ಕ್ರಾಸ್ ಬಳಿ ಶನಿವಾರ ನಸುಕಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಾಸಿದ್ದು, 6 ಜನ ಮೃತಪಟ್ಟು, 21 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.

ಹುಬ್ಬಳ್ಳಿಯಿಂದ ಗದಗ ಮಾರ್ಗದಲ್ಲಿ ಹಂಪಿ ಕಡೆ ಹೊರಟಿದ್ದ ಬಸ್ಸು, ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದು, ನಂತರ ಎದುರಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಪಲ್ಟಿ ಆಗಿದೆ.

ಮಹಾರಾಷ್ಟ್ರದಿಂದ ಕರ್ನಾಟಕ ಪ್ರವಾಸಕ್ಕೆ ಬಂದಿದ್ದ 40 ಮಂದಿಯಲ್ಲಿ 6 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇವರಲ್ಲಿ ವಿಶ್ವನಾಥ ಮೇಸ್ತ್ರಿ 76), ದಿನಕರ ಮೇಸ್ತ್ರಿ(74), ರಮೇಶ್ ಜೈಪಾಲ್ (70), ಸಿಮೇಧಾ ಜಮಖಂಡಿಕರ್ (65), ಲವೋ ಕೇಲ್ಕರ್ (65), ಸುಚಿತ್ರಾ ರಾಹುಲ್ (65) ಸೇರಿದ್ದಾರೆ.

ಗಂಭೀರವಾಗಿ ಗಾಯಗೊಂಡವರಲ್ಲಿ 19 ಜನರನ್ನು ಹುಬ್ಬಳ್ಳಿಯ ಕಿಮ್ಸ್ ಮತ್ತು 3 ಜನರನ್ನು ಅಣ್ಣಿಗೇರಿಯ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಂದು ವಾರದಿಂದ ಕರ್ನಾಟಕ ಪ್ರವಾಸದಲ್ಲಿದ್ದ ಈ ತಂಡದಲ್ಲಿ ಬಹುತೇಕರು ಹಿರಿಯ ನಾಗರಿಕರು. ತಮ್ಮ ಪ್ರವಾಸದ ಕೊನೆಯ ಭಾಗವಾಗಿ ಹಂಪಿಯತ್ತ ಪ್ರಯಾಣ ಬೆಳೆಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು