ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಸರಣಿ ಅಪಘಾತ: ಹಲವರಿಗೆ ಗಾಯ

7

ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಸರಣಿ ಅಪಘಾತ: ಹಲವರಿಗೆ ಗಾಯ

Published:
Updated:

ರಾಮನಗರ: ತಾಲ್ಲೂಕಿನ ವಡೇರಹಳ್ಳಿ ಸಮೀಪ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬುಧವಾರ ಬೆಳಗ್ಗೆ ಸರಣಿ ಅಪಘಾತ ಸಂಭವಿಸಿದ್ದು, ಎಂಟು ಜನರು ಗಾಯಗೊಂಡಿದ್ದಾರೆ.

ಹೆದ್ದಾರಿಯಲ್ಲಿನ ರಸ್ತೆ ಉಬ್ಬು ಗಮನಿಸದ ಟೆಂಪೊ ಟ್ರಾವೆಲರ್ ವಾಹನದ ಚಾಲಕ ವೇಗವಾಗಿ ಬಂದು ಎರಡು ಬೈಕ್, ಒಂದು ಆಟೊಗೆ ಡಿಕ್ಕಿ ಹೊಡೆದಿದ್ದಾನೆ.

ಆಟೊ ಹಾಗೂ ಟೆಂಪೊಗಳೆರಡು ಪಲ್ಟಿ ಆಗಿದ್ದು, ಅದರಲ್ಲಿ ಇದ್ದ ಪ್ರಯಾಣಿಕರು ಗಾಯಗೊಂಡರು.

ಗಾಯಾಳುಗಳನ್ನು ರಾಮನಗರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದಿಂದಾಗಿ ಹೆದ್ದಾರಿಯಲ್ಲಿ ಕೆಲ ಸಮಯ ವಾಹನಗಳ ಒಡಾಟಕ್ಕೆ ಅಡಚಣೆ ಆಗಿತ್ತು.

ಬರಹ ಇಷ್ಟವಾಯಿತೆ?

 • 6

  Happy
 • 2

  Amused
 • 3

  Sad
 • 0

  Frustrated
 • 2

  Angry

Comments:

0 comments

Write the first review for this !