ಶಂಕಿತ ರೋಹಿಂಗ್ಯಾ ಮುಸ್ಲಿಮರು ವಶಕ್ಕೆ

7

ಶಂಕಿತ ರೋಹಿಂಗ್ಯಾ ಮುಸ್ಲಿಮರು ವಶಕ್ಕೆ

Published:
Updated:

ಹುಬ್ಬಳ್ಳಿ: ನಗರದ ದಾಜಿಬಾನಪೇಟೆಯಲ್ಲಿ ಶನಿವಾರ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಮೂವರು ಶಂಕಿತ ರೋಹಿಂಗ್ಯಾ ಮುಸ್ಲಿಮರನ್ನು ಉಪನಗರ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.

ಮಯನ್ಮಾರ್‌ನಲ್ಲಿ ನಡೆದ ಹಿಂಸಾಚಾರದ ಚಿತ್ರಗಳನ್ನು ತೋರಿಸಿ ನಗರದಲ್ಲಿ ಸಾರ್ವಜನಿಕರಿಂದ ಆರ್ಥಿಕ ನೆರವು ಬೇಡುತ್ತಿದ್ದರು ಎಂದು ಪೊಲೀಸರಿಗೆ ಒಪ್ಪಿಸಿರುವ ಸ್ಥಳೀಯರು ತಿಳಿಸಿದ್ದಾರೆ.

ವಿಶ್ವಸಂಸ್ಥೆಯ ಹೈಕಮಿಷನರ್‌ (ಯುಎನ್‌ಎಚ್‌ಸಿಆರ್‌) ನೀಡಿರುವ ಗುರುತಿನ ಚೀಟಿಗಳನ್ನು ನಾಸಿರುದ್ದೀನ್‌ ಹಾಗೂ ಮೊಹಮ್ಮದ್‌ ಜುಬೇರ್‌ ಎಂಬುವವರಿಂದ ವಶಪಡಿಸಿಕೊಂಡಿದ್ದು, ಅವುಗಳ ಸಾಚಾತನದ ಕುರಿತು ಪರಿಶೀಲಿಸಲಾಗುತ್ತಿದೆ ಎಂದು ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ರೇಣುಕಾ ಸುಕುಮಾರ್‌ ಮಾಹಿತಿ ನೀಡಿದರು.

ಮೈಸೂರು, ಮಹಾರಾಷ್ಟ್ರದ ರತ್ನಾಗಿರಿ, ಆಂಧ್ರಪ್ರದೇಶದ ನೆಲ್ಲೂರಿನ ಮುಸ್ಲಿಂ ಧರ್ಮಗುರುಗಳ ಶಿಫಾರಸು ಪತ್ರಗಳು ಆರೋಪಿಗಳ ಬಳಿ ದೊರೆತಿವೆ. ನಾಲ್ವರ ಪೈಕಿ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಮತ್ತೊಬ್ಬ ತಪ್ಪಿಸಿಕೊಂಡಿದ್ದಾನೆ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !