ಗುರುವಾರ , ಸೆಪ್ಟೆಂಬರ್ 19, 2019
22 °C

ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್‌ ಕೊಲೆ

Published:
Updated:

ಕಲಬುರ್ಗಿ: ತಾಲ್ಲೂಕಿನ ಬಬಲಾದ್‌ ಗ್ರಾಮದಲ್ಲಿ ಶುಕ್ರವಾರ ರಾತ್ರಿ ರೌಡಿಶೀಟರ್‌ ಒಬ್ವನನ್ನು ಯುವಕರ ಗುಂಪು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದೆ.

ಕಲಬುರ್ಗಿ ನಗರದ ಕಾಂತಾ ಕಾಲೊನಿ ನಿವಾಸಿ ಆನಂದ್‌ ರಾಮಪೂರೆ (30) ಕೊಲೆಯಾದ ವ್ಯಕ್ತಿ. ಕೊಲೆ, ಸುಲಿಗೆ ಸೇರಿದಂತೆ ಮತ್ತಿತರ ಅಪರಾಧ ಪ್ರಕರಣಗಳ ಕುರಿತು ಈತನ ಮೇಲೆ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.

ಆನಂದ್‌ ಶುಕ್ರವಾರ ಬಬಲಾದ್‌ಗೆ ಬರುವುದನ್ನು ಪತ್ತೆ ಮಾಡಿದ ದುಷ್ಕರ್ಮಿಗಳು ಹೊಂಚು ಹಾಕಿ ಕೊಲೆ ಮಾಡಿದ್ದಾರೆ. ಇದು ಹಳೆ ದ್ವೇಷದಿಂದ ನಡೆದ ಕೊಲೆ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Post Comments (+)