ನೀರಿನ ಕೊರತೆ: ಆರ್‌ಟಿಪಿಎಸ್‌ 2 ಘಟಕಗಳು ಸ್ಥಗಿತ

7

ನೀರಿನ ಕೊರತೆ: ಆರ್‌ಟಿಪಿಎಸ್‌ 2 ಘಟಕಗಳು ಸ್ಥಗಿತ

Published:
Updated:

ರಾಯಚೂರು: ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರ (ಆರ್‌ಟಿಪಿಎಸ್)ದಲ್ಲಿ ನೀರಿನ ಕೊರತೆ ಉಂಟಾಗಿದ್ದು, 2 ಮತ್ತು 8 ನೇ ಘಟಕಗಳ ಕಾರ್ಯವನ್ನು ಗುರುವಾರ ಸ್ಥಗಿತಗೊಳಿಸಲಾಗಿದೆ.

7 ನೇ ಘಟಕವನ್ನು ನಿರ್ವಹಣೆ ಸಂಬಂಧ ಮೊದಲೇ ಸ್ಥಗಿತ ಮಾಡಲಾಗಿದೆ. 1 ನೇ ಘಟಕದಲ್ಲಿ ವಿದ್ಯುತ್ ಪರಿವರ್ತಕ ಸುಟ್ಟು ಹೋಗಿದೆ. ಹೀಗಾಗಿ ಸದ್ಯಕ್ಕೆ ನಾಲ್ಕು ಘಟಕಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, 600 ಮೆಗಾವಾಟ್ ವಿದ್ಯುತ್ ಉತ್ಪಾದನೆ ಆಗುತ್ತಿದೆ.

ನಾರಾಯಣಪುರ ಜಲಾಶಯದಿಂದ ನೀರು ಪಡೆದುಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಸದ್ಯಕ್ಕೆ ನಾಲ್ಕು ವಿದ್ಯುತ್ ಘಟಕಗಳಿಗೆ ಒಂದು ದಿನಕ್ಕೆ ಸಾಕಾಗುವಷ್ಟು ಮಾತ್ರ ನೀರಿನ ಸಂಗ್ರಹವಿದೆ ಎಂದು ಗೊತ್ತಾಗಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !