ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಟಿಪಿಎಸ್‌ ಎಂಟು ಘಟಕಗಳಿಂದಲೂ ವಿದ್ಯುತ್‌ ಉತ್ಪಾದನೆ

Last Updated 23 ಏಪ್ರಿಲ್ 2020, 13:06 IST
ಅಕ್ಷರ ಗಾತ್ರ

ಶಕ್ತಿನಗರ: ಈ ವರ್ಷ ಬೇಸಿಗೆಯಲ್ಲಿ ಕೊರೊನಾ ಮುನ್ನಚ್ಚರಿಕೆಯಿಂದ ಲಾಕ್‌ಡೌನ್‌ ಘೋಷಿಸಿದ್ದರೂ ಆರ್‌ಟಿಪಿಎಸ್‌ನಿಂದ ವಿದ್ಯುತ್‌ ಬೇಡಿಕೆ ಅಧಿಕವಾಗಿದ್ದರಿಂದ ಸದ್ಯಕ್ಕೆ ಎಲ್ಲ ಎಂಟು ಘಟಕಗಳಿಂದಲೂ ವಿದ್ಯುತ್ ಉತ್ಪಾದಿಸಲಾಗುತ್ತಿದೆ.‌

ಏಪ್ರಿಲ್‌ 22 ರಂದು ರಾಜ್ಯದಲ್ಲಿ 208 ದಶಲಕ್ಷ ಯುನಿಟ್‌ ವಿದ್ಯುತ್‌ ಬೇಡಿಕೆ ಇತ್ತು. ಅದರಲ್ಲಿ 36 ದಶಲಕ್ಷ ಯುನಿಟ್‌ವರೆಗೂ ಆರ್‌ಟಿಪಿಎಸ್‌ನಿಂದ ವಿದ್ಯುತ್‌ ಪೂರೈಕೆ ಆಗಿರುವುದು ಗಮನಾರ್ಹ. ಒತ್ತಡದ ಮಧ್ಯೆಯೂ ವಿದ್ಯುತ್‌ ಬೇಡಿಕೆಗೆ ಅನುಗುಣವಾಗಿ ಆರ್‌ಟಿಪಿಎಸ್‌ ಅಧಿಕಾರಿಗಳು ಮತ್ತು ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ.

ಎಂಟು ಘಟಕಗಳಲ್ಲಿ ಒಟ್ಟು ನಾಲ್ಕು ಸಾವಿರ ಉದ್ಯೋಗಿಗಳಿದ್ದಾರೆ.ದೇಶದಲ್ಲಿ ಲಾಕ್‌ಡೌನ್‌ ಇರುವುದರಿಂದ ಶೇ 50 ನೌಕರರು ಮಾತ್ರ ಕೆಲಸ ಮಾಡುತ್ತಿದ್ದಾರೆ. ಲಭ್ಯವಿರುವ ಉದ್ಯೋಗಿಗಳೆ ಮೂರು ಪಾಳಿಗಳಲ್ಲಿ ಕಾರ್ಯನಿರ್ವಹಿಸಿ, ವಿದ್ಯುತ್‌ ಬೇಡಿಕೆಯನ್ನು ಪೂರೈಕೆ ಮಾಡಿರುವುದು ವಿಶೇಷ.

‘ಆರ್‌ಟಿಪಿಎಸ್‌ ಎಂಟು ಘಟಕಗಳಿಂದ ಒಟ್ಟು 1,720 ಮೆಗಾವಾಟ್ ವಿದ್ಯುತ್‌ ಉತ್ಪಾದನೆ ಆಗುತ್ತದೆ. ಬುಧವಾರ ಒಂದೇ ದಿನದಲ್ಲಿ 35 ಸಾವಿರ ದಶಲಕ್ಷ ಉತ್ಪಾದನೆ ಮಾಡಿರುವುದು ಖುಷಿ ತಂದಿದೆ’ ಎಂದು ಆರ್‌ಟಿಪಿಎಸ್‌ಚಾಲನೆ ಮತ್ತು ನಿರ್ವಹಣೆ ವಿಭಾಗದ ಮುಖ್ಯ ಎಂಜಿನಿಯರ್‌ವೆಂಕಟಚಲಾಪತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT