‘ನಿಯಮ ಸರಳೀಕರಣ’

7
ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ

‘ನಿಯಮ ಸರಳೀಕರಣ’

Published:
Updated:

ಬೆಳಗಾವಿ: ‘ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯ ಹಣ ಬಳಕೆಗಿರುವ ತೊಡಕುಗಳನ್ನು ನಿವಾರಿಸಲು ನಿಯಮಗಳನ್ನು ಸರಳೀಕರಣ ಮಾಡ ಲಾಗುತ್ತದೆ. ಜತೆಗೆ, ಒಂದೇ ಕಂತಿನಲ್ಲಿ ₹2 ಕೋಟಿ ಬಿಡುಗಡೆಗೊಳಿಸಲಾಗುತ್ತದೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.
ಕುಮಾರಸ್ವಾಮಿ ಭರವಸೆ ನೀಡಿದರು.

ವಿಧಾನಸಭೆಯಲ್ಲಿ ಮಂಗಳವಾರ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿ, ‘ಅನುದಾನವನ್ನು ಹೆಚ್ಚಿಸುವ ಪ್ರಸ್ತಾವ ಸರ್ಕಾರದ ಮುಂದಿಲ್ಲ’ ಎಂದರು. ಹಾಲಾಡಿ ಶ್ರೀನಿವಾಸ ಶೆಟ್ಟಿ, ‘2013–14ರಲ್ಲಿ ಅನುದಾನವನ್ನು ₹2 ಕೋಟಿಗೆ ಏರಿಸಲಾಗಿತ್ತು. ಆಗ ಸಿಮೆಂಟ್‌ ಚೀಲದ ಬೆಲೆ ₹180, ಮರಳಿನ ದರ ₹3 ಸಾವಿರ, ಜಲ್ಲಿ ದರ ₹3.5 ಸಾವಿರ ಇತ್ತು. ಈಗ ದರ ದುಪ್ಪಟ್ಟಾಗಿದೆ. ನಿಧಿಯ ಮೊತ್ತವನ್ನು ₹5 ಕೋಟಿಗೆ ಏರಿಸಬೇಕು‘ ಎಂದು ಆಗ್ರಹಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !