ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಋಣಮುಕ್ತ ಪತ್ರ’ ವಿಳಂಬಕ್ಕೆ ಕಾರಣ

Last Updated 5 ಜನವರಿ 2019, 19:35 IST
ಅಕ್ಷರ ಗಾತ್ರ

ಕಂದಾಯ ಇಲಾಖೆ ಅಭಿವೃದ್ಧಿಪಡಿಸಿದ ತಂತ್ರಾಂಶದಲ್ಲಿ ರೈತರ ಮಾಹಿತಿ ಅಳವಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಜೊತೆಯಲ್ಲೇ ಸಾಲ ಮನ್ನಾಕ್ಕೆ ಸರ್ಕಾರ ವಿಧಿಸಿರುವ ಷರತ್ತುಗಳನ್ನು ಆಧರಿಸಿ ಅರ್ಹರನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ.

ವಾಣಿಜ್ಯ ಬ್ಯಾಂಕು: ರಾಜ್ಯದಲ್ಲಿರುವ 42 ವಾಣಿಜ್ಯ ಬ್ಯಾಂಕುಗಳು ಮತ್ತು 3 ಗ್ರಾಮೀಣ ಬ್ಯಾಂಕುಗಳ ಒಟ್ಟು 6,526 ಬ್ಯಾಂಕು ಶಾಖೆಗಳಿಂದ ಮಾಹಿತಿ ಸಂಗ್ರಹಿಸುವ ಕೆಲಸ ನಡೆ ಯುತ್ತಿದೆ. ಸಹಕಾರ ಸಂಘಗಳ ಅರ್ಹ ಸಾಲಗಾರರ ಮಾಹಿತಿಯ ಜೊತೆ ತಾಳೆ ಮಾಡಿ ಅನರ್ಹರನ್ನು ಬಿಟ್ಟು ಬ್ಯಾಂಕುಗಳು ಮನ್ನಾಕ್ಕೆ ಅರ್ಹರಾದ ರೈತರ ಪಟ್ಟಿ ಸಿದ್ಧಪಡಿಸಬೇಕು. ಹೀಗೆ ಅರ್ಹರನ್ನು ಗುರುತಿಸಿದ ಬಳಿಕ ಅಂಥವರಿಗೆ ರಾಜ್ಯ ಸರ್ಕಾರ ಋಣ ಮುಕ್ತ ಪ್ರಮಾಣ ಪತ್ರ ನೀಡಲಿದೆ. ಅರ್ಹ ರೈತರ ಸಾಲಗಳ ಮಾಹಿತಿ ಬ್ಯಾಂಕುಗಳಿಂದ ಪಡೆದ ಬಳಿಕ ಹಣ ಬಿಡುಗಡೆ ಆಗಲಿದೆ.

ಸಹಕಾರ ಸಂಘ: ರಾಜ್ಯದಲ್ಲಿರುವ 5,346 ಸಹಕಾರ ಸಂಘಗಳು ರೈತರಿಗೆ ಸಾಲ ನೀಡಿವೆ. ಸಹಕಾರ ಸಂಘಗಳ ಸಾಲ ಮನ್ನಾ ಮಾಡಲು ₹ 800 ಕೋಟಿ ಬಿಡುಗಡೆ ಮಾಡಲಾಗಿದೆ. ಈ ಪೈಕಿ ರಾಜ್ಯದ ಎರಡು ಜಿಲ್ಲೆಗಳು ಅಂದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡ ಬಳ್ಳಾಪುರ ತಾಲ್ಲೂಕಿನ 219 ಫಲಾನುಭವಿಗಳ ₹ 1.29 ಕೋಟಿ ಮತ್ತು ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ 182 ಫಲಾನುಭವಿಗಳಿಗೆ ₹ 89 ಲಕ್ಷ ಬ್ಯಾಂಕು ಖಾತೆಗಳಿಗೆ ಜಮೆ ಮಾಡಿ, ಪ್ರಾಯೋಗಿಕವಾಗಿ ಋಣ ಮುಕ್ತ ಪತ್ರ ನೀಡಲಾಗಿದೆ. ಈ ತಾಲ್ಲೂಕುಗಳಲ್ಲಿನ ಸಾಲ ಮನ್ನಾ ಯೋಜನೆಗೆ ₹ 50 ಕೋಟಿ ಬಿಡುಗಡೆ ಮಾಡಲಾಗಿದೆ.

ಸಾಲ ಮನ್ನಾ ಹೇಗೆ -ಷರತ್ತು ಏನು?

ಸಮ್ಮಿಶ್ರ ಸರ್ಕಾರ 2018ರ ಆ. 14ರಂದು ಸಾಲಮನ್ನಾ ಆದೇಶ ಹೊರಡಿಸಿದೆ. ಅದರ ಪ್ರಕಾರ, 2018ರ ಜುಲೈ 10ಕ್ಕೆ ಇರುವ ಹೊರಬಾಕಿ ಸಾಲದಲ್ಲಿ ಒಂದು ಕುಟುಂಬಕ್ಕೆ ₹ 1 ಲಕ್ಷವರೆಗೆ ಮನ್ನಾ ಆಗಲಿದೆ. ಸಾಲ ಮರುಪಾವತಿಸಲು ಬರುವ ಗಡುವು ದಿನ ಸಾಲ ಮನ್ನಾ ಜಾರಿಗೆ ಬರುತ್ತದೆ. ಸಾಲ ಪಡೆದ ರೈತ ಮೃತಪಟ್ಟರೆ ವಾರಸುದಾರರಿಗೂ ಸೌಲಭ್ಯ ಸಿಗುತ್ತದೆ. ಆದರೆ, ₹ 20 ಸಾವಿರಕ್ಕಿಂತ ಹೆಚ್ಚು ವೇತನ/ ಪಿಂಚಣಿ ಪಡೆಯುವ ನೌಕರರಿಗೆ, ಕಳೆದ 3 ವರ್ಷಗಳಲ್ಲಿ ಯಾವುದಾರೂ ಒಂದು ವರ್ಷ ಆದಾಯ ತೆರಿಗೆ ಪಾವತಿಸಿದ್ದರೆ ಈ ಯೋಜನೆ ಅನ್ವಯವಾಗುವುದಿಲ್ಲ. ಯೋಜನೆಯ ಲಾಭ ಪಡೆಯಲು ಚಾಲ್ತಿ ಸಾಲದ ₹ 1 ಲಕ್ಷಕ್ಕಿಂತ ಹೆಚ್ಚಿನ ಅಸಲು ಗಡುವಿನ ದಿನದ ಒಳಗೆ ಮತ್ತು ಸುಸ್ತಿ ಸಾಲದ ಮರುಪಾವತಿ ದಿನದವರೆಗಿನ ಸಂಪೂರ್ಣ ಬಡ್ಡಿ ಮತ್ತು ₹1 ಲಕ್ಷಕ್ಕಿಂತ ಹೆಚ್ಚಿನ ಅಸಲನ್ನು 2019ರ ಮಾರ್ಚ್‌ 31ರ ಒಳಗೆ ಪಾವತಿಸಬೇಕು.

ಸಾಲ ಮನ್ನಾ ಪ್ರಕ್ರಿಯೆ ಹೇಗೆ?: ಕಂದಾಯ ಇಲಾಖೆ ಅಭಿವೃದ್ಧಿಪಡಿಸಿದ ತಂತ್ರಾಂಶದಲ್ಲಿ 2018ರ ಜುಲೈ 10ಕ್ಕೆ ಹೊರಬಾಕಿ ಹೊಂದಿರುವ ಸಾಲದ ಮಾಹಿತಿಯನ್ನು ಸಹಕಾರ ಸಂಘಗಳ ಕಾರ್ಯದರ್ಶಿಗಳು ಅಳವಡಿಸಿದ ನಂತರ ರೈತರಿಂದ ಸ್ವಯಂ ದೃಢೀಕರಣ ಪತ್ರ ಪಡೆದು ಮಾಹಿತಿಯನ್ನು ಅದೇ ತಂತ್ರಾಂಶದಲ್ಲಿ ಅಳವಡಿಸಲಾಗುವುದು. ಬಳಿಕ ಅರ್ಹರನ್ನು ತಂತ್ರಾಂಶದಲ್ಲಿಯೇ ಗುರುತಿಸಲಾಗುತ್ತದೆ. ಹೀಗೆ, ತಂತ್ರಾಂಶದಲ್ಲಿ ಅರ್ಹಗೊಂಡ ರೈತರ ಅರ್ಹತೆಯನ್ನು ತಾಲ್ಲೂಕು ಮಟ್ಟದ ಸಮಿತಿ ನಿರ್ಣಯಿಸಿದ ನಂತರ ರೈತರ ಸಾಲ (ಉಳಿತಾಯ) ಖಾತೆಗೆ ಅನುದಾನ ಬಿಡುಗಡೆ ಆಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT