‘2029ರ ವರೆಗೆ ಮೋದಿಯೇ ಗೆಲ್ಲಲಿ’

7

‘2029ರ ವರೆಗೆ ಮೋದಿಯೇ ಗೆಲ್ಲಲಿ’

Published:
Updated:

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು 2019ರಲ್ಲಿ ಮಾತ್ರವಲ್ಲ, 2024 ಮತ್ತು 2029ರಲ್ಲೂ ಗೆಲ್ಲಬೇಕು. ಇಲ್ಲವಾದರೆ ಈ ದೇಶ ಉದ್ಧಾರವಾಗುವುದಿಲ್ಲ ಎಂದು ಸಾಹಿತಿ ಎಸ್.ಎಲ್.ಭೈರಪ್ಪ ಅಭಿಪ್ರಾಯಪಟ್ಟರು.

ಸಂಸದ ಪ್ರತಾಪ ಸಿಂಹ ಅವರು ಶುಕ್ರವಾರ ಭೈರಪ್ಪ ಅವರನ್ನು ಭೇಟಿ ಮಾಡಿ, ಕೇಂದ್ರ ಸರ್ಕಾರದ ನಾಲ್ಕು ವರ್ಷಗಳ ಸಾಧನೆಯ ವಿವರಗಳನ್ನೊಳಗೊಂಡ ಪುಸ್ತಕ ನೀಡಿದರು.

ಪುಸ್ತಕ ಸ್ವೀಕರಿಸಿ ಮಾತನಾಡಿದ ಅವರು, ಕಳೆದ ನಾಲ್ಕು ವರ್ಷಗಳಲ್ಲಿ ದೇಶದಲ್ಲಿ ಹಲವು ಅತ್ಯುತ್ತಮ ಕೆಲಸಗಳು ಟೇಕಾಫ್‌ ಆಗಿವೆ. ಅವುಗಳು ಮುಂದುವರಿಯಬೇಕಾದರೆ ಮೋದಿ ಗೆಲ್ಲಲೇಬೇಕು ಎಂದರು. ‘ಮೋದಿ ಅವರನ್ನು ಮತ್ತೆ ಗೆಲ್ಲಿಸದಿದ್ದರೆ ದೊಡ್ಡ ಅವಿವೇಕತನವಾಗುತ್ತದೆ. ಅವರನ್ನು ಸೋಲಿಸಲು ನಾಲ್ಕೈದು ಪಕ್ಷಗಳು ಒಟ್ಟಾಗಿವೆ. ಆದರೆ ಮೋದಿ ರೀತಿಯಲ್ಲಿ ಕೆಲಸ ಮಾಡಬಲ್ಲ ಯಾವನೇ ನಾಯಕ ಈ ದೇಶದಲ್ಲಿಲ್ಲ’ ಎಂದರು.

ಭಾರತದ ಬಗ್ಗೆ ಜಗತ್ತಿನ ಇತರ ರಾಷ್ಟ್ರಗಳು ಇಟ್ಟಿದ್ದ ಮನೋಭಾವವನ್ನೇ ಅವರು ಬದಲು ಮಾಡಿದ್ದಾರೆ. ಪ್ರತಿಯೊಂದು ಕೆಲಸವನ್ನು ಭಾರತದ ಭವಿಷ್ಯ ಯೋಚಿಸಿಕೊಂಡೇ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 11

  Happy
 • 1

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !