ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಬರಿಮಲೆ: ಸಾಂಪ್ರದಾಯಿಕ ಸೌಂದರ್ಯ ಉಳಿಯಲಿ ಎಂದ ವೀರೇಂದ್ರ ಹೆಗ್ಗಡೆ

Last Updated 23 ಅಕ್ಟೋಬರ್ 2018, 18:45 IST
ಅಕ್ಷರ ಗಾತ್ರ

ಮಂಗಳೂರು: ಶಬರಿಮಲೆಯ ಸಾಂಪ್ರದಾಯಿಕ ಸೌಂದರ್ಯ ಉಳಿಸಿಕೊಳ್ಳುವುದು ಉತ್ತಮ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.‌ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.

ಧರ್ಮಸ್ಥಳದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, 'ಶಬರಿಮಲೆ ದೇವಸ್ಥಾನಕ್ಕೆ 48 ದಿನ ಬ್ರಹ್ಮಚರ್ಯ ವ್ರತ ಪಾಲಿಸಿ ಭಕ್ತರು ತೆರಳುತ್ತಾರೆ. ಈ ವ್ರತಗಳು ಇರುವುದು ಸಂಯಮಕ್ಕಾಗಿ. ಮನೋನಿಗ್ರಹ ಇಲ್ಲದಿದ್ದರೆ ಸಮಾಜದಲ್ಲಿ ಅಸಮಾನತೆ ಹೆಚ್ಚಾಗಬಹುದು. ಸಂಯಮ‌ ಸಡಿಲವಾಗದಂತೆ, ಮೀಟೂ ಪ್ರಕರಣದಂತಹ ಘಟನೆ ನಡೆಯಲು ಅವಕಾಶ ಸೃಷ್ಟಿಸಬಾರದು ಎಂದು ಅಭಿಪ್ರಾಯಪಟ್ಟರು.

‘ದೇವಸ್ಥಾನದ ಸಾಂಪ್ರದಾಯಿಕ ಸೌಂದರ್ಯ ಉಳಿಸಿಕೊಳ್ಳುವುದು ಒಳಿತು’ ಎಂದು ಹೆಗ್ಗಡೆ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT