ಮಂಗಳವಾರ, ಆಗಸ್ಟ್ 20, 2019
22 °C

ಯುವ ಬರಹಗಾರರಿಗೆ ಕಥಾ ಕಮ್ಮಟ

Published:
Updated:

ಸಾಗರ: ತಾಲ್ಲೂಕಿನ ಹೆಗ್ಗೋಡಿನ ಸಂಸ ಟ್ರಸ್ಟ್ ಸೆಪ್ಟೆಂಬರ್ ತಿಂಗಳಿನಲ್ಲಿ ಗ್ರಾಮೀಣ ಪ್ರದೇಶದ ಯುವ ಬರಹಗಾರರಿಗೆ ಕಥಾ ಕಮ್ಮಟವನ್ನು ಆಯೋಜಿಸಿದೆ.

ಕಥನಗಾರಿಕೆ, ವಿಮರ್ಶೆ, ವಿಶ್ಲೇಷಣೆ, ರಚನಾ ವಿನ್ಯಾಸ ಇವೇ ಮೊದಲಾದ ವಿಷಯಗಳ ಕುರಿತು ಕಮ್ಮಟದಲ್ಲಿ ಕನ್ನಡದ ಪ್ರಮುಖ ಕತೆಗಾರರು ಮಾರ್ಗದರ್ಶನ ನೀಡಲಿದ್ದಾರೆ.

ಆಸಕ್ತರು ಆಗಸ್ಟ್ 20ರೊಳಗೆ ತಮ್ಮ ಸ್ವವಿವರಗಳೊಂದಿಗೆ ಅರ್ಜಿಯನ್ನು ಕಾರ್ಯದರ್ಶಿ, ಸಂಸ್ಕೃತಿ ಸಮಾಜ ಟ್ರಸ್ಟ್, ಕೇಡಲಸರ-ಹೆಗ್ಗೋಡು, ಹೊನ್ನೇಸರ ಅಂಚೆ, ಸಾಗರ ತಾಲ್ಲೂಕು ಈ ವಿಳಾಸಕ್ಕೆ ಕಳುಹಿಸಬಹುದು. ಆಯ್ಕೆಯಾದವರಿಗೆ ಊಟ ಮತ್ತು ವಸತಿ ವ್ಯವಸ್ಥೆ ಇರುತ್ತದೆ. ವಿವರಗಳಿಗೆ
ಮೊ: 7338365167 ಅಥವಾ 9731929731 ಸಂಪರ್ಕಿಸಬಹುದು.

Post Comments (+)