ಸಹ್ಯಾದ್ರಿ ವಿಜ್ಞಾನ ಕಾಲೇಜು: ಸಹಪಾಠಿಗಳಿಂದಲೇ ವಿದ್ಯಾರ್ಥಿಗೆ ಚೂರಿ ಇರಿತ

7

ಸಹ್ಯಾದ್ರಿ ವಿಜ್ಞಾನ ಕಾಲೇಜು: ಸಹಪಾಠಿಗಳಿಂದಲೇ ವಿದ್ಯಾರ್ಥಿಗೆ ಚೂರಿ ಇರಿತ

Published:
Updated:

ಶಿವಮೊಗ್ಗ: ಯುವತಿಯರನ್ನು ಚುಡಾಯಿಸಬಾರದು ಎಂಬ ಬುದ್ಧಿಮಾತಿಗೆ ಕುಪಿತಗೊಂಡ ಇಲ್ಲಿನ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಗುರುವಾರ ಸಹಪಾಠಿಗೇ ಚೂರಿಯಿಂದ ಇರಿದಿದ್ದಾರೆ. 

ಅಂತಿಮ ವರ್ಷದ ಬಿ.ಎಸ್ಸಿ ವಿದ್ಯಾರ್ಥಿ ಅವಿನಾಶ್ (21) ಇರಿತಕ್ಕೆ ಒಳಗಾದವರು. ದ್ವಿತೀಯ ಬಿ.ಎಸ್ಸಿ ವಿದ್ಯಾರ್ಥಿಗಳಾದ ಗೋಕುಲ್ ಮತ್ತು ಅಮಿತ್‌ ಸಿಂಗ್‌ ಆರೋಪಿಗಳು.  

ಗೋಕುಲ್ ನಿತ್ಯವೂ ಕಾಲೇಜಿನಲ್ಲಿ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ. ಅವಿನಾಶ್‌ ಹಾಗೂ ಅವರ ಸ್ನೇಹಿತರು ಆತನಿಗೆ ಬುದ್ಧಿ ಮಾತು ಹೇಳಿದ್ದಾರೆ. ಮತ್ತೆ ಅದೇ ಚಾಳಿ ಮುಂದುವರಿಸಿದಾಗ ಪ್ರಾಧ್ಯಾಪಕರ ಗಮನಕ್ಕೆ ತಂದಿದ್ದಾರೆ. ಮೂರು ದಿನಗಳ ಹಿಂದೆ ಪ್ರಾಧ್ಯಾಕರು ಕರೆದು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ಇದರಿಂದ ಕುಪಿತಗೊಂಡಿದ್ದ ಗೋಕುಲ್ ತನ್ನ ಸ್ನೇಹಿತ ಅಮಿತ್‌ಸಿಂಗ್ ಜತೆ ಸೇರಿ ಗುರುವಾರ ಕಾಲೇಜಿಗೆ ಬಂದ ಅವಿನಾಶ್‌ ಹೊಟ್ಟೆಯ ಎಡಭಾಗಕ್ಕೆ ಚೂರಿಯಿಂದ ಇರಿದು, ಪರಾರಿಯಾಗಿದ್ದಾರೆ. ಸ್ಥಳದಲ್ಲಿದ್ದ ಸ್ನೇಹಿತರು ತಕ್ಷಣವೇ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

 ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

‘ಸ್ವಲ್ಪ ರಕ್ತಸ್ರಾವವಾಗಿದೆ. ಎಲ್ಲ ರೀತಿಯ ತಪಾಸಣೆ ನಡೆಸಲಾಗಿದೆ. ಯಾವುದೇ ಅಪಾಯ ಇಲ್ಲ. ವಿದ್ಯಾರ್ಥಿ ಚೇತರಿಸಿಕೊಳ್ಳುತ್ತಿದ್ದಾನೆ’ ಎಂದು ಮೆಗ್ಗಾನ್ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ರಘುನಂದನ್ ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !