ಗುರುವಾರ , ನವೆಂಬರ್ 14, 2019
19 °C

ಸಕಲೇಶಪುರ ಬಳಿ ಟ್ಯಾಂಕರ್‌ನಿಂದ ಅನಿಲ ಸೋರಿಕೆ: ಹತ್ತಿರದ ಕಾಲೇಜುಗಳಿಗೆ ರಜೆ

Published:
Updated:

ಹಾಸನ: ಸಕಲೇಶಪುರ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಲ್‌ಪಿಜಿ ಟ್ಯಾಂಕರ್ನಿಂದ ಅನಿಲ ಸೋರಿಕೆಯಾಗಿ ಆತಂಕ‌ ಉಂಟಾಗಿದೆ.

ಕೆಇಬಿ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಟ್ಯಾಂಕರ್ ತೆರಳುತ್ತಿತ್ತು. ಇದರ ಮುಖ್ಯ ವಾಲ್ವ್‌ನ ಬೋಲ್ಟ್ ತುಂಡಾಗಿ ಭಾರಿ ಪ್ರಮಾಣದ ಅನಿಲ ಸೋರಿಕೆಯಾಗಿದೆ.

ತಕ್ಷಣ ಸ್ಥಳಕ್ಕೆ ಬಂದ ಅಗ್ನಿ ಶಾಮಕ ತಂಡ ಜಲಪಿರಂಲಗಿ‌ ಮೂಲಕ ಟ್ಯಾಂಕರ್ ಸ್ಫೋಟ ಗೊಳ್ಳದಂತೆ ಕ್ರಮ‌ ಕೈಗೊಂಡಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಸಮೀಪದ ಪದವಿಪೂರ್ವ ಕಾಲೇಜು, ಬಾಲಕಿಯರ ಕಾಲೇಜುಗಳಿಗೆ ರಜೆ ನೀಡಿ ವಿದ್ಯಾರ್ಥಿಗಳನ್ನು ಹೊರಗೆ ಕಳುಹಿಸಲಾಯಿತು. ಅದೇ ರೀತಿ ಸರ್ಕಾರಿ‌ ಕಚೇರಿ ಸಿಬ್ಬಂದಿಯನ್ನ  ಹೊರಗೆ ಕಳುಹಿಸಲಾಯಿತು. 

ವಾಹನ ಸಂಚಾರ ಬಂದ್‌ ಮಾಡಿದ್ದರಿಂದ ಹೆದ್ದಾರಿಯಲ್ಲಿ ವಾಹನಗಳು ಸಾಲು ಗಟ್ಟಿ ನಿಂತಿದ್ದವು. ಪರ್ಯಾಯ ಮಾರ್ಗದಲ್ಲಿ ವಾಹನಗಳನ್ನು ಬಿಡಲಾಗುತ್ತಿದೆ.

ಪ್ರತಿಕ್ರಿಯಿಸಿ (+)