ಸಮತಾಸಾಗರ ಮುನಿ ನಿಧನ

7

ಸಮತಾಸಾಗರ ಮುನಿ ನಿಧನ

Published:
Updated:
Prajavani

ಮೋಳೆ(ಬೆಳಗಾವಿ):  ಯಮಸಲ್ಲೇಖನ ವ್ರತ ಕೈಗೊಂಡಿದ್ದ, ಸನ್ಮತಿ ಸಾಗರ ಮುನಿಮಹಾರಾಜರ ಶಿಷ್ಯ ಸಮತಾಸಾಗರ ಮುನಿ ಮಹಾರಾಜರು (84) ಶನಿವಾರ ನಿಧನರಾದರು.

ಕಾಗವಾಡದ ಮಗದುಮ್ ತೋಟದಲ್ಲಿ ಭಾನುವಾರ ಅಂತ್ಯಕ್ರಿಯೆ ನೆರವೇರಿತು.

ಸಮತಾಸಾಗರ ಮುನಿಗಳು ಬೇಡಕಿಹಾಳದವರು. ನಿಪ್ಪಾಣಿಯ ಜೆಐಇ ಬಾಗೇವಾಡಿ ಕಾಲೇಜಿನಲ್ಲಿ ಪ್ರಾಧ್ಯಾಪಕ, ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸಿದ್ದರು. 2006ರಲ್ಲಿ ಲೌಕಿಕ ಜೀವನದಿಂದ ವೈರಾಗ್ಯ ಹೊಂದಿ ಸನ್ಮತಿ ಸಾಗರ ಮುನಿಮಹಾರಾಜರಿಂದ  ದಿಗಂಬರ ಮುನಿ ದೀಕ್ಷೆ ಪಡೆದುಕೊಂಡು ಸನ್ಯಾಸತ್ವ ಸ್ವೀಕರಿಸಿದ್ದರು. ಕಾಲ್ನಡಿಗೆ ಮೂಲಕ ದೇಶದ ಮೂಲೆಮೂಲೆಗಳ ತೀರ್ಥಕ್ಷೇತ್ರಗಳ ದರ್ಶನ ಪಡೆದಿದ್ದರು. ಜೈನ ಧರ್ಮ ಶಾಸ್ತ್ರಗಳ ಗ್ರಂಥಗಳನ್ನು ರಚಿಸಿದ್ದರು. ಕಾಗವಾಡ-ಮೈಸಾಳ ಗ್ರಾಮಗಳ ಮಧ್ಯದಲ್ಲಿರುವ ಮಹಾವೀರ ಆಶ್ರಮದಲ್ಲಿ 10 ದಿನಗಳಿಂದ ಯಮ ಸಲ್ಲೇಖನ ವ್ರತದಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !