ಸಂಪಾಜೆ ಘಾಟಿ ಬಂದ್‌ ಸಂಭವ

7

ಸಂಪಾಜೆ ಘಾಟಿ ಬಂದ್‌ ಸಂಭವ

Published:
Updated:

ಮಂಗಳೂರು: ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳ ನಡುವಿನ ಸಂಪರ್ಕದ ಪ್ರಮುಖ ಕೊಂಡಿಯಾಗಿರುವ ಸಂಪಾಜೆ ಘಾಟಿ (ರಾಷ್ಟ್ರೀಯ ಹೆದ್ದಾರಿ 275) ಆರು ತಿಂಗಳಿಗೂ ಹೆಚ್ಚು ಕಾಲ ಬಂದ್‌ ಆಗಲಿದೆ. ಇನ್ನೊಂದೆಡೆ ಶಿರಾಡಿ ಘಾಟಿ ಮಾರ್ಗದಲ್ಲಿ ವಾಹನ ಸಂಚಾರ ಪುನರಾರಂಭವೂ ತಡವಾಗಲಿದೆ.

ಸಂಪಾಜೆ ಸಮೀಪದ ಜೋಡುಪಾಲ ತಿರುವಿನಿಂದ ಮಡಿಕೇರಿ ಸಮೀಪದ ಮದೆನಾಡುವರೆಗೆ ಒಟ್ಟು 13 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ಮೇಲೆ ಭೂಕುಸಿತ ಸಂಭವಿಸಿದೆ. ಕೆಲವೆಡೆ ರಸ್ತೆ ಸಂಪೂರ್ಣ ನಾಶವಾಗಿದೆ. ಇನ್ನು ಕೆಲವಡೆ ಒಂದು ಕಡೆಯಿಂದ ಗುಡ್ಡ ಜರಿದು ರಸ್ತೆಯ ಮೇಲೆ ಬಿದ್ದಿದ್ದರೆ, ಇನ್ನೊಂದು ಭಾಗದಲ್ಲಿ ರಸ್ತೆ ಬದಿ ಕುಸಿದು ಪಯಸ್ವಿನಿ ನದಿ ಪಾಲಾಗಿದೆ. ರಸ್ತೆಯ ಮೇಲೆ ಬಿದ್ದಿರುವ ಮಣ್ಣು, ಕಲ್ಲು ಮತ್ತು ಮರಗಳನ್ನು ತೆರವು ಮಾಡಲು ತಿಂಗಳುಗಟ್ಟಲೆ ಸಮಯ ಬೇಕಾಗಬಹುದು.

ಜೋಡುಪಾಲ ಸರ್ಕಾರಿ ಶಾಲೆಯ ಅನತಿ ದೂರದಲ್ಲಿ ಮೊದಲ ಕುಸಿತ ಸಂಭವಿಸಿದೆ. ಅಲ್ಲಿಂದ ಮದೆನಾಡುವರೆಗೆ 15ರಿಂದ 20 ಸ್ಥಳಗಳಲ್ಲಿ ಬೃಹತ್‌ ಪ್ರಮಾಣದ ಗುಡ್ಡ ಕುಸಿದು ರಸ್ತೆಯ ಮೇಲೆ ಬಿದ್ದಿದೆ. ಕೆಲವೆಡೆ ಅರ್ಧ ಕಿಲೋಮೀಟರ್‌ಗಿಂತಲೂ ಹೆಚ್ಚು ದೂರದ ಕುಸಿತ ಆಗಿದೆ. ರಸ್ತೆ ಮಾರ್ಗದಲ್ಲಿ ಆಗಿರುವ ಹಾನಿ ಅಂದಾಜು ಮಾಡಲು ಸಾಧ್ಯವಾಗಿಲ್ಲ. ಬೆಂಗಳೂರಿನಿಂದ ಬಂದಿದ್ದ ಹಿರಿಯ ಅಧಿಕಾರಿಗಳ ತಂಡ ಮುಂದಕ್ಕೆ ಸಾಗಲು ಸಾಧ್ಯವಾ ಗದೇ ಜೋಡುಪಾಲದಿಂದಹಿಂದಿರುಗಿದೆ.

 

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !