ಪುಣ್ಯಸ್ನಾನ: ಆರು ಸಾವು

7

ಪುಣ್ಯಸ್ನಾನ: ಆರು ಸಾವು

Published:
Updated:

ಸಿಂಧನೂರು (ರಾಯಚೂರು ಜಿಲ್ಲೆ): ಸಂಕ್ರಾಂತಿ ಅಂಗವಾಗಿ ಪುಣ್ಯಸ್ನಾನಕ್ಕೆ ತೆರಳಿದ್ದವರು ಮೃತಪಟ್ಟಿದ್ದಾರೆ.

ನಟರಾಜ ಕಾಲೊನಿಯ ಬಸವರಾಜ ಶಂಕ್ರಗೌಡ ಪಾಟೀಲ (17) ಮತ್ತು ನವೀನ ಸಂಗಪ್ಪ (15) ಬುಧವಾರ ವಳಬಳ್ಳಾರಿ ಬಳಿಯ ನದಿಯಲ್ಲಿ ಮುಳುಗಿದ್ದಾರೆ.

ತಾಲ್ಲೂಕಿನ ರಾಗಲಪರ್ವಿ ಗ್ರಾಮದ ಭರತ್‌ಗೌಡ (24) ಕೊಪ್ಪಳ ಜಿಲ್ಲೆಯ ಆನೆಗುಂದಿಯಲ್ಲಿ ತುಂಗಾಭದ್ರಾ ನದಿಯಲ್ಲಿ ಮುಳುಗಿ ಸತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಾಗಲಕೋಟೆ/ಗದಗ: ಬಾಗಲಕೋಟೆ ಜಿಲ್ಲೆಯ ಚಿಕ್ಕಸಂಗಮದ ಕೃಷ್ಣೆಯ ಹಿನ್ನೀರಿನಲ್ಲಿ ಇಬ್ಬರು ಬಾಲಕರು, ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಬಳಿ ಕಾಳಿ ನದಿಯಲ್ಲಿ ಒಬ್ಬ ಯುವಕ ಮಂಗಳವಾರ ಸಂಕ್ರಾಂತಿ ಪುಣ್ಯಸ್ನಾನಕ್ಕೆ ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !