ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಬಿಐ ಕೆವೈಸಿ: ಗ್ರಾಹಕರ ಗೋಳು

Last Updated 29 ಫೆಬ್ರುವರಿ 2020, 19:13 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ತನ್ನ ಗ್ರಾಹಕರಿಗೆ ಕೆವೈಸಿ(ನಿಮ್ಮ ಗ್ರಾಹಕರನ್ನು ಅರಿಯಿರಿ) ಮಾಹಿತಿಗಳನ್ನು ಅಪ್‌ಡೇಟ್‌ ಮಾಡಲು ನಿಗದಿಪಡಿಸಿದ್ದ ಕೊನೆಯ ದಿನಾಂಕಕ್ಕೆ ಬಹಳಷ್ಟು ಮುಂಚಿತವಾಗಿಯೇ ಹಲವು ಗ್ರಾಹಕರ ಖಾತೆಗಳನ್ನು ಬ್ಲಾಕ್‌ ಮಾಡಿದೆ.

‘ಕೆವೈಸಿ ಅಪ್‌ಡೇಟ್‌ ಮಾಡಲು ಫೆಬ್ರುವರಿ 28ರ ಗಡುವು ನೀಡಿತ್ತು. ಆದರೆ, ಫೆಬ್ರುವರಿ 12ರಂದೇ ನನ್ನ ಖಾತೆಯನ್ನು ಬ್ಲಾಕ್ ಮಾಡಲಾಗಿದೆ. ಆ ಬಗ್ಗೆ ಇ–ಮೇಲ್‌ ಆಗಲಿ ಅಥವಾ ಎಸ್‌ಎಂಎಸ್‌ ಅಗಲಿ ಬಂದಿಲ್ಲ’ ಎಂದು 20 ವರ್ಷದಿಂದ ಖಾತೆ ಹೊಂದಿರುವ ಗ್ರಾಹಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

‘ಖಾತೆ ತೆರೆದಿರುವುದು ಹಾಸನದಲ್ಲಿ. ಸದ್ಯ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಫೆಬ್ರುವರಿ 12ರಂದು ಬ್ಯಾಂಕ್‌ಗೆ ಹೋದಾಗ ಖಾತೆ ಬ್ಲಾಕ್‌ ಆಗಿದೆ, ನೀವು ಖಾತೆ ತೆರೆದಿರುವ ಶಾಖೆಯಲ್ಲಿಯೇ ಅಪ್‌ಡೇಟ್‌ ಮಾಡಿಸಿ ಎಂದು ಬ್ಯಾಂಕ್‌ನ ಸಿಬ್ಬಂದಿ ಹೇಳಿದರು. ಆ ಹೊತ್ತಿಗೆ ಕೈಯಲ್ಲಿ ಪಾಸ್‌ಬುಕ್‌ ಇರಲಿಲ್ಲ. ಹಾಗಾಗಿ, ಹಾಸನ ಶಾಖೆಯ ದೂರವಾಣಿ ಸಂಖ್ಯೆ ನೀಡುವಂತೆ ಕೇಳಿದರೆ, ಅದಕ್ಕೂ ಒಪ್ಪದ ಅವರು, ಶಾಖೆಯ ದೂರವಾಣಿ ಸಂಖ್ಯೆ ಕೊಡುವಂತಿಲ್ಲ ಎಂದರು. ಮನೆಗೆ ಬಂದು ಪಾಸ್‌ಬುಕ್‌ನಲ್ಲಿದ್ದ ದೂರವಾಣಿ ಸಂಖ್ಯೆಗೆ ಕರೆ ಮಾಡಿದರೆ, ಅದಕ್ಕೆ ಇನ್‌ಕಮಿಂಗ್‌ ಕರೆ ಸೌಲಭ್ಯವೇ ಇಲ್ಲ’ ಎಂದು ಅವರು ಬ್ಯಾಂಕಿಂಗ್‌ ಸೇವೆಯ ಬಗ್ಗೆ ಆಕ್ರೋಶ ಹೊರಹಾಕಿದರು.

ಫೆಬ್ರುವರಿ 28ರ ನಂತರವೂ ಕೆವೈಸಿ (ಆಧಾರ್‌, ಪ್ಯಾನ್‌, ಮತದಾರರ ಗುರುತಿನ ಚೀಟಿ ಇತ್ಯಾದಿ) ಅಪ್‌ಡೇಟ್‌ ಮಾಡಲು ಅವಕಾಶ ಇದೆಯಾದರೂ ಆ ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಠ ಒಂದು ವಾರವಾದರೂ ಬೇಕು. ಅಲ್ಲಿಯವರೆಗೆ ಖಾತೆಗೆ ಹಣ ಕಟ್ಟುವುದು ಅಥವಾ ತೆಗೆಯಲು ಆಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT