ದೌರ್ಜನ್ಯ ಹೆಚ್ಚಳ: ಐದು ದಿನಕ್ಕೊಬ್ಬ ದಲಿತನ ಕೊಲೆ!

7
ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕಾಯ್ದೆ; 2017ರ ವಾರ್ಷಿಕ ವರದಿ ಬಿಡುಗಡೆ

ದೌರ್ಜನ್ಯ ಹೆಚ್ಚಳ: ಐದು ದಿನಕ್ಕೊಬ್ಬ ದಲಿತನ ಕೊಲೆ!

Published:
Updated:

ಬೆಂಗಳೂರು: ರಾಜ್ಯದಲ್ಲಿ 5 ದಿನಕ್ಕೊಬ್ಬ ದಲಿತನ ಕೊಲೆ ಆಗುತ್ತಿದೆ. 1 ಅಥವಾ 2 ದಿನಕ್ಕೊಂದು ದಲಿತ ಹಾಗೂ ಆದಿವಾಸಿ ಮಹಿಳೆಯ ಮೇಲೆ ಅತ್ಯಾಚಾರ ನಡೆಯುತ್ತಿದೆ. ಪ್ರತಿ 4 ಗಂಟೆಗೊಂದು ದಲಿತರ ದೌರ್ಜನ್ಯ ಪ್ರಕರಣ ವರದಿಯಾಗುತ್ತಿದೆ.

‘ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕಾಯ್ದೆ’ ಅನುಷ್ಠಾನದ 2017ರ ವಾರ್ಷಿಕ ರಾಜ್ಯ ವರದಿ ಅಂಶಗಳಿವು. ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲ್ವಿಚಾರಣೆ ಮತ್ತು ಬಲವರ್ಧನ ಸಮಿತಿ’ ಹಾಗೂ ‘ಕರ್ನಾಟಕ ದಲಿತ ಮಹಿಳಾ ವೇದಿಕೆ’ ಸಿದ್ಧಪಡಿಸಿರುವ ಈ ವಾರ್ಷಿಕ ವರದಿಯನ್ನು ಮಂಗಳವಾರ ಬಿಡುಗಡೆ ಮಾಡಲಾಗುತ್ತಿದೆ.  

‘2017ರಲ್ಲಿ 73 ಮಂದಿ ದಲಿತ ವ್ಯಕ್ತಿಗಳನ್ನು ಕೊಲೆ ಮಾಡಲಾಗಿದೆ. 190 ದಲಿತ ಮಹಿಳೆಯರ ಮೇಲೆ ಅತ್ಯಾಚಾರ ನಡೆದಿದೆ. ಈ ಕೊಲೆ ಹಾಗೂ ಅತ್ಯಾಚಾರ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿ’ ಎಂದು ವರದಿಯಲ್ಲಿ ಹೇಳಲಾಗಿದೆ.

‘ಪರಿಶಿಷ್ಟ ಜಾತಿಯ 1,809 ಮಂದಿ ಹಾಗೂ ಪರಿಶಿಷ್ಟ ಪಂಗಡದ 370 ಮಂದಿ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. 6 ವರ್ಷಗಳಿಂದಲೂ ಬೆಂಗಳೂರು ನಗರ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿವೆ. ಈ ವರ್ಷವೂ ಅತೀ ಹೆಚ್ಚು ದೌರ್ಜನ್ಯ ಪ್ರಕರಣ ದಾಖಲಾದ ಜಿಲ್ಲೆಗಳ ಪೈಕಿ ಬೆಂಗಳೂರು ನಗರ ಜಿಲ್ಲೆಯೇ ಮೊದಲ ಸ್ಥಾನದಲ್ಲಿದೆ’ ಎಂಬುದು ವರದಿಯಲ್ಲಿವೆ.

ಶೇ3.79 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆ: ‘ದೌರ್ಜನ್ಯ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುವ ಪ್ರಮಾಣ ಶೇ 3.79ರಷ್ಟು ಮಾತ್ರ. ಶೇ75ರಷ್ಟು ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಗೊಂಡಿದ್ದಾರೆ. ಶೇ 18.61ರಷ್ಟು ಪ್ರಕರಣಗಳಲ್ಲಿ ಪೊಲೀಸರು, ಬಿ–ರಿಪೋರ್ಟ್‌ ಸಲ್ಲಿಸಿದ್ದಾರೆ. ವಿಚಿತ್ರವೆಂದರೆ, ರಾಜ್ಯದ 12 ಜಿಲ್ಲೆಗಳಲ್ಲಿ ಶಿಕ್ಷೆಯ ಪ್ರಮಾಣ ಶೂನ್ಯವಾಗಿದೆ’ ಎಂಬ ಮಾಹಿತಿ ವರದಿಯಲ್ಲಿದೆ.

2017ರ ಅಂಕಿ–ಅಂಶ

* 2,140 ದೌರ್ಜನ್ಯ ಪ್ರಕರಣಗಳ ಒಟ್ಟು ಸಂಖ್ಯೆ

* 1,108 ನ್ಯಾಯಾಲಯದಲ್ಲಿ ವಿಲೇವಾರಿಯಾದ ಪ್ರಕರಣ

* 42 ಶಿಕ್ಷೆಯಾದ ಪ್ರಕರಣಗಳು

* 983 ಖುಲಾಸೆಗೊಂಡ ಪ್ರಕರಣಗಳು

* 1560 ಇತ್ಯರ್ಥವಾಗದೇ ಉಳಿದ ಪ್ರಕರಣಗಳು

* 196 ಬೆಂಗಳೂರಿನಲ್ಲಿ ದಾಖಲಾದ ಪ್ರಕರಣ

ಬರಹ ಇಷ್ಟವಾಯಿತೆ?

 • 8

  Happy
 • 3

  Amused
 • 2

  Sad
 • 2

  Frustrated
 • 12

  Angry

Comments:

0 comments

Write the first review for this !