ವಿಜ್ಞಾನ ನಿಘಂಟುಗಳ ಆ್ಯಪ್‌

ಬುಧವಾರ, ಮೇ 22, 2019
29 °C

ವಿಜ್ಞಾನ ನಿಘಂಟುಗಳ ಆ್ಯಪ್‌

Published:
Updated:
Prajavani

ಇಂದು ಕೇವಲ ಭಾಷೆಗೆ ಸಂಬಂಧಿಸಿದ್ದಲ್ಲದೆ, ಪ್ರತಿಯೊಂದು ವಿಷಯ, ವಿಭಾಗಕ್ಕೂ ಸಂಬಂಧಿಸಿದ ಶಬ್ದಗಳನ್ನು ಪ್ರತ್ಯೇಕವಾಗಿ ಸಂಪಾದಿಸಿ ಸಿದ್ಧಪಡಿಸಿರುವ ನಿಘಂಟುಗಳು ಪ್ರಕಟಗೊಳ್ಳುತ್ತಿವೆ. ವಿಜ್ಞಾನ, ವೈದ್ಯಕೀಯ, ತಂತ್ರಜ್ಞಾನ, ಶೈಕ್ಷಣಿಕ, ಭಾಷೆ, ರಸಾಯನವಿಜ್ಞಾನ, ಸಸ್ಯವಿಜ್ಞಾನ, ಜೀವವಿಜ್ಞಾನ, ಭೌತವಿಜ್ಞಾನ... ಹೀಗೆ ವಿಷಯವಾರು ನಿಘಂಟುಗಳು ಇಂದು ದೊರೆಯುತ್ತಿವೆ.

ಹಲವು ನಿಘಂಟುಗಳು ಪುಸ್ತಕ ರೂಪದಲ್ಲಷ್ಟೇ ಅಲ್ಲದೇ, ಡಿಜಿಟಲ್ ರೂಪದಲ್ಲೂ ಲಭ್ಯವಿವೆ. ಇದಕ್ಕಾಗಿಯೇ ಅನೇಕ ಜಾಲತಾಣಗಳು ಮತ್ತು ಕಿರುತಂತ್ರಾಂಶಗಳು ರಚನೆಯಾಗಿವೆ. ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಪದಗಳ ಅರ್ಥಗಳನ್ನು ತಿಳಿಯಲು ವಿಜ್ಞಾನ ನಿಘಂಟುಗಳು ಅತ್ಯವಶ್ಯಕ. ಆ್ಯಪ್ ಮಾದರಿಯಲ್ಲಿ ದೊರೆಯುವ ವಿಜ್ಞಾನ ನಿಘಂಟುಗಳು ಗೂಗಲ್ ಪ್ಲೇಸ್ಟೋರ್‌ನಲ್ಲಿವೆ. ಅವುಗಳಲ್ಲಿ ಕೆಲವು ಉಪಯುಕ್ತವಾದ ಆ್ಯಪ್‌ಗಳನ್ನು ಕುರಿತು ನೋಡೋಣ.

BasicScience Dictionary: Experiments & Formulas: ವಿಜ್ಞಾನ ಕ್ಷೇತ್ರದಲ್ಲಿನ ಬಹುತೇಕ ವಿಷಯಗಳಿಗೆ ಸಂಬಂಧಿಸಿದ ಪದಗಳನ್ನು ಆ ಪದಗಳಿಗೆ ಅರ್ಥ, ವೈಜ್ಞಾನಿಕ ಪದಗಳು ಮತ್ತು ವಿವರಣೆಯನ್ನು ನೀಡುವ ಆ್ಯಪ್. ಆರು ಸಾವಿರಕ್ಕೂ ಅಧಿಕ ವೈಜ್ಞಾನಿಕ ಅರ್ಥವಿವರ ಮತ್ತು ಇನ್ನೂರಕ್ಕೂ ಹೆಚ್ಚು ವಿಜ್ಞಾನ ಪ್ರಯೋಗಗಳನ್ನು ಅಳವಡಿಸಿದ್ದಾರೆ. ಪ್ರಾಥಮಿಕ ಹಂತದಿಂದ ಹಿಡಿದು ಉನ್ನತ ಹಂತದ ಕಲಿಕೆ ವರೆಗೆ ಬಳಸಲಾಗುವ ವಿಜ್ಞಾನ ಪದಗಳ ಅರ್ಥವನ್ನು ತಿಳಿದುಕೊಳ್ಳಬಹುದು. ವಿಜ್ಞಾನ ಸಂಗತಿಗಳು, ವೈಜ್ಞಾನಿಕ ಸೂತ್ರಗಳು, ಕ್ವಿಜ್‌ಗಳನ್ನೂ ಅಳವಡಿಸಿದ್ದಾರೆ. ಈ ನಿಘಂಟಲ್ಲಿ ಅಳವಡಿಸಲಾಗಿರುವ ಪದಗಳನ್ನು 30 ವಿಜ್ಞಾನ ವಿಷಯಗಳನ್ನಾಗಿ ವಿಂಗಡಿಸಲಾಗಿದೆ. ಉಪಯುಕ್ತ ಎನ್ನುವ ಪದಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ಸೌಲಭ್ಯವೂ ಇದೆ.

ಹೆಚ್ಚಿನ ಮಾಹಿತಿಗೆ www.edutainmentventures.com ನೋಡಬಹುದು.

Dictionary PCB [Phy-Che-Bio]: ಭೌತವಿಜ್ಞಾನ, ರಸಾಯನವಿಜ್ಞಾನ ಮತ್ತು ಜೀವವಿಜ್ಞಾನ ಸಂಬಂಧಿಸಿದ ಪದ ಮತ್ತು ಪದಗಳ ಅರ್ಥವಿವರಣೆಯನ್ನು ಒಳಗೊಂಡ ಉಪಯುಕ್ತ ಆ್ಯಪ್. ಭೌತವಿಜ್ಞಾನದಲ್ಲಿ 25 ಸಾವಿರಕ್ಕೂ ಅಧಿಕ, ರಸಾಯನವಿಜ್ಞಾನದಲ್ಲಿ 9 ಸಾವಿರ ಮತ್ತು ಜೀವವಿಜ್ಞಾನದಲ್ಲಿ 3ಸಾವಿರಕ್ಕೂ ಅಧಿಕ ಪದಗಳನ್ನು ಅಳವಡಿಸಲಾಗಿದ್ದು, ಇವು ಅನೇಕ ಪರ್ಯಾಯ ಪದಗಳು, ವೈಜ್ಞಾನಿಕ ವ್ಯಾಖ್ಯಾನ ಹಾಗೂ ಅರ್ಥವಿವರಣೆಯನ್ನು ಒಳಗೊಂಡಿವೆ. ಹತ್ತನೇ ತರಗತಿ ಮತ್ತು ಪಿಯುಸಿ ಹಂತದ ವಿಜ್ಞಾನ ವಿಷಯಗಳ ಕಲಿಕೆಗೆ ಮತ್ತು ಹಲವು ಪ್ರವೇಶ ಪರೀಕ್ಷೆಗಳಿಗೂ ಉಪಯುಕ್ತವಾಗಿದೆ. BhoomiApps ಎಂಬ ಸಂಸ್ಥೆ ರಚಿಸಿದೆ.

Science Glossary: ವಿದ್ಯಾರ್ಥಿ ಮತ್ತು ಶಿಕ್ಷಕರಿಗೆ ಉಪಯುಕ್ತವಾಗುವಂತೆ ರಚಿಸಲಾಗಿರುವ ವಿಜ್ಞಾನ ಪದಕೋಶಗಳನ್ನು ಒಳಗೊಂಡ ಆ್ಯಪ್. ವೈಜ್ಞಾನಿಕ ಪದಗಳ ವ್ಯಾಖ್ಯಾನ, ಅರ್ಥವಿವರಣೆ ಮತ್ತು ಸ್ಪಷ್ಟ ಸಂಕ್ಷಿಪ್ತ ವಿವರಣೆಯನ್ನು ನೀಡುತ್ತದೆ. 350ಕ್ಕೂ ಹೆಚ್ಚು ವಿಜ್ಞಾನ ಪದಗಳನ್ನು ಅಳವಡಿಸಲಾಗಿದ್ದು, ಸುಲಭವಾಗಿ ಹುಡುಕುವ ಸೌಲಭ್ಯ ಕಲ್ಪಿಸಲಾಗಿದೆ. Tatusea ಎಂಬ ಸಂಸ್ಥೆ ಈ ಆ್ಯಪ್ ರಚಿಸಿದೆ.

ಈ ಮೇಲಿನ ಕಿರುತಂತ್ರಾಂಶಗಳ ಜೊತೆಗೆ ವಿಜ್ಞಾನ ಕ್ಷೇತ್ರದಲ್ಲಿ ಬರುವ ಎಲ್ಲಾ ವಿಷಯಗಳಿಗೂ ಪ್ರತೇಕ ಅಥವಾ ವಿಷಯಾಧಾರಿತವಾದ ವಿಜ್ಞಾನ ನಿಘಂಟುಗಳ ಕಿರುತಂತ್ರಾಂಶಗಳು ಪ್ಲೇಸ್ಟೋರ್‌ನಲ್ಲಿ ಸಿಗುತ್ತವೆ. ಕೆಲವು ಉಚಿತವಾಗಿ ದೊರೆತರೆ ಇನ್ನೂ ಕೆಲವು ಹಣಪಾವತಿಸಿ ಉಪಯೋಗಿಸುವ ಆ್ಯಪ್‌ಗಳು. 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !