ಸೀಟ್‌ ಮ್ಯಾಟ್ರಿಕ್ಸ್‌ ಪ್ರಕಟ: 770 ವೈದ್ಯಕೀಯ ಸೀಟುಗಳು ಖೋತಾ

7

ಸೀಟ್‌ ಮ್ಯಾಟ್ರಿಕ್ಸ್‌ ಪ್ರಕಟ: 770 ವೈದ್ಯಕೀಯ ಸೀಟುಗಳು ಖೋತಾ

Published:
Updated:

ಬೆಂಗಳೂರು: 770 ವೈದ್ಯಕೀಯ ಸೀಟುಗಳು ಖೋತಾ ಆಗಿದ್ದು, ವೈದ್ಯರಾಗುವ ಕನಸು ಹೊತ್ತಿರುವ ವಿದ್ಯಾರ್ಥಿಗಳಿಗೆ ಆಘಾತ ತಂದಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ 2018ನೇ ಸಾಲಿನ ವೈದ್ಯಕೀಯ ಹಾಗೂ ದಂತವೈದ್ಯಕೀಯ ಕೋರ್ಸ್‌ಗಳ ಸೀಟ್‌ ಮ್ಯಾಟ್ರಿಕ್ಸ್‌ ಪ್ರಕಟಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ದೊಡ್ಡ ಮಟ್ಟದ ಕಡಿತವಾಗಿದೆ.

ಈ ವರ್ಷ ವೈದ್ಯಕೀಯ ವಿಭಾಗದಲ್ಲಿ 5,920 ಹಾಗೂ ದಂತ ವೈದ್ಯಕೀಯ ವಿಭಾಗದಲ್ಲಿ 2,754 ಸೀಟುಗಳು ಲಭ್ಯವಿವೆ. ದಂತ ವೈದ್ಯಕೀಯದಲ್ಲಿ ಹಿಂದಿನ ವರ್ಷಕ್ಕಿಂತ ಹೆಚ್ಚುವರಿ 446 ಸೀಟುಗಳು ಸಿಗಲಿವೆ. ಆದರೆ ವೈದ್ಯಕೀಯ ವಿಭಾಗಕ್ಕೆ ಸೀಟುಗಳನ್ನು ಕಡಿತಗೊಳಿಸಲಾಗಿದೆ. ಹೋದ ವರ್ಷ 54 ಕಾಲೇಜುಗಳಲ್ಲಿ 6,690 ಸೀಟುಗಳು ಲಭ್ಯವಿದ್ದವು.

ಆದ್ದರಿಂದ ಈ ವರ್ಷ ವೈದ್ಯಕೀಯ ವಿಭಾಗದ ಸೀಟುಗಳ ಪೈಪೋಟಿ ಹೆಚ್ಚಲಿದೆ.

ಕಾಲೇಜು, ಕೋರ್ಸ್‌ ಹಾಗೂ ಪ್ರವರ್ಗವಾರು ಸೀಟುಗಳ ವಿವರಗಳನ್ನು ವಿದ್ಯಾರ್ಥಿಗಳ ಮಾಹಿತಿಗಾಗಿ http://kea.kar.nic.in ನಲ್ಲಿ ಪ್ರಕಟಿಸಲಾಗಿದೆ. ಅರ್ಹ ವಿದ್ಯಾರ್ಥಿಗಳು ತಮ್ಮ ಆಯ್ಕೆಯನ್ನು ಜುಲೈ 10, ಸಂಜೆ 5ರೊಳಗೆ ದಾಖಲಿಸಬಹುದಾಗಿದೆ.

ಮುಂದಿನ ವಾರ ಕೌನ್ಸೆಲಿಂಗ್‌ ಆರಂಭವಾಗುವ ನಿರೀಕ್ಷೆ ಇದೆ. ಕರ್ನಾಟಕದ ಕೆಲವು ಕಾಲೇಜುಗಳಲ್ಲಿ ಉತ್ತಮ ಮೂಲಸೌಕರ್ಯ ಇಲ್ಲದ ಕಾರಣ ಸೀಟುಗಳನ್ನು ನೀಡಲು ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ನಿರಾಕರಿಸಿದೆ. ಮೊದಲ ಹಂತದಲ್ಲಿ 16,942 ಎಂಜಿನಿಯರಿಂಗ್‌ ಸೀಟುಗಳನ್ನು ಮಾತ್ರ ಪ್ರಕಟಿಸಲಾಗಿದೆ. ಸೋಮವಾರ ಉಳಿದ ಸೀಟುಗಳನ್ನು ಪ್ರಕಟಿಸಲಾಗುತ್ತದೆ.

ಬರಹ ಇಷ್ಟವಾಯಿತೆ?

 • 3

  Happy
 • 3

  Amused
 • 3

  Sad
 • 0

  Frustrated
 • 1

  Angry

Comments:

0 comments

Write the first review for this !