ಏಪ್ರಿಲ್‌ 15ಕ್ಕೆ ದ್ವಿತೀಯ ಪಿ.ಯು ಫಲಿತಾಂಶ ಪ್ರಕಟ

ಸೋಮವಾರ, ಏಪ್ರಿಲ್ 22, 2019
32 °C

ಏಪ್ರಿಲ್‌ 15ಕ್ಕೆ ದ್ವಿತೀಯ ಪಿ.ಯು ಫಲಿತಾಂಶ ಪ್ರಕಟ

Published:
Updated:

ಬೆಂಗಳೂರು: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಇದೇ 15 ರಂದು (ಸೋಮವಾರ) ಪ್ರಕಟಿಸಲಾಗುವುದು ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿ.ಶಿಖಾ ತಿಳಿಸಿದರು.

ಸೋಮವಾರ ಬೆಳಿಗ್ಗೆ 11 ಕ್ಕೆ ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಫಲಿತಾಂಶ ಪ್ರಕಟಿಸುವುದರ ಜೊತೆಗೆ ಮಧ್ಯಾಹ್ನ 12 ಗಂಟೆಗೆ ವೆಬ್‌ಸೈಟ್‌ಗೆ (www.pue.kar.nic.in ) ಫಲಿತಾಂಶ ಅಪ್‌ಲೋಡ್‌ ಮಾಡಲಾಗುವುದು ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು. 

ಮಂಗಳವಾರ (ಏ.16) ರಾಜ್ಯದ ಎಲ್ಲ ಪದವಿಪೂರ್ವ ಕಾಲೇಜುಗಳ ನೋಟಿಸ್‌ ಬೋರ್ಡ್‌ಗಳಲ್ಲಿ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದರು. 

ಇದೇ ಮೊದಲ ಬಾರಿಗೆ ಅತ್ಯಂತ ಕಡಿಮೆ ಅವಧಿಯಲ್ಲಿ ಫಲಿತಾಂಶ ಪ್ರಕಟಿಸಲಾಗುತ್ತಿದೆ. ಮಾರ್ಚ್‌ 1 ರಿಂದ 18 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಿತು. ಮಾರ್ಚ್‌ 23 ರಿಂದ ಮೌಲ್ಯಮಾಪನ ಆರಂಭವಾಗಿ ಕಳೆದ ವಾರಾಂತ್ಯದಲ್ಲಿ ಮುಗಿದಿತ್ತು.

ಈ ಬಾರಿ ಉತ್ತರ ಪತ್ರಿಕೆಗಳ ಮೌಲ್ಯಮಾಪನದ ನಂತರ ಅಂಕಗಳನ್ನು ಆನ್‌ಲೈನ್ ಮೂಲಕ ಸರ್ವರ್‌ಗೆ ಅಪ್‌ಲೋಡ್ ಮಾಡಿದ್ದರಿಂದ ಬೇಗನೆ ಫಲಿತಾಂಶ ನೀಡಲು ಸಾಧ್ಯವಾಗಿದೆ. ಸಾಮಾನ್ಯವಾಗಿ ಸಿಇಟಿ ಪರೀಕ್ಷೆಯ ಬಳಿಕ ಪಿಯುಸಿ ಫಲಿತಾಂಶವನ್ನು ಪ್ರಕಟಿಸಲಾಗುತ್ತಿತ್ತು.

results.nic.in, examresults.net ವೆಬ್‌ಸೈಟ್‌ಗಳಲ್ಲಿಯೂ ಫಲಿತಾಂಶವನ್ನು ನೋಡಬಹುದು

ಬರಹ ಇಷ್ಟವಾಯಿತೆ?

 • 30

  Happy
 • 0

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !