ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಳು ಹೊಸ ಮಾರ್ಗಗಳಿಗೆ ವಿಮಾನ ಹಾರಾಟ

Last Updated 26 ಅಕ್ಟೋಬರ್ 2018, 20:15 IST
ಅಕ್ಷರ ಗಾತ್ರ

ಬೆಂಗಳೂರು:‌ ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏಳು ಹೊಸ ಮಾರ್ಗಗಳಿಗೆಅ. 28ರಿಂದ ವಿಮಾನಗಳ ಹಾರಾಟ ಆರಂಭವಾಗಲಿದೆ.

‘ಕಾನ್ಪುರ, ಗೋರಖಪುರ ಮತ್ತು ಉದಯಪುರ (ಸ್ಪೈಸ್ ಜೆಟ್), ಉದಯಪುರ ಮತ್ತು ಪ್ರಯಾಗ್‍ರಾಜ್ (ಇಂಡಿಗೊ), ಗುವಾಹಟಿ ಮೂಲಕ ಐಜ್ವಾಲ್ (ಜೆಟ್ ಏರ್‌ವೇಸ್) ಮತ್ತು ಕೊಲ್ಹಾಪುರ (ಅಲೆಯನ್ಸ್ ಏರ್) ನಗರಗಳಿಗೆ ವಿಮಾನಗಳು ಹಾರಾಟ ನಡೆಸಲಿವೆ. ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ನಿಲ್ದಾಣದ ಕಾರ್ಯಾಚರಣೆಯ ಮುಖ್ಯ ಅಧಿಕಾರಿ ಜಾವೇದ್ ಮಲಿಕ್ ತಿಳಿಸಿದ್ದಾರೆ.

‘ಸರಕು ಸಾಗಣೆಯಲ್ಲಿ ಟರ್ಕಿಶ್ ಕಾರ್ಗೊದ ವಿಮಾನಗಳು, ವಾರಕ್ಕೆ ಎರಡು ಬಾರಿ ಇಸ್ತಾಂಬುಲ್ ಮತ್ತು ಬೆಂಗಳೂರು ನಡುವೆ ಹಾರಾಡಲಿವೆ. ಕೊಲಂಬೊ ಮತ್ತು ದಮನ್ ಮೂಲಕವೂ ಅಕ್ಟೋಬರ್ 31ರಿಂದ ಹಾರಾಟ ನಡೆಸುವ ಮೂಲಕ ತಮ್ಮ ಜಾಲವನ್ನು ವಿಸ್ತರಿಸಲಿವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT