ಗುರುವಾರ , ಡಿಸೆಂಬರ್ 12, 2019
17 °C

ಮನೆಗೆ ಟಿಕೆಟ್‌ ತಂದುಕೊಟ್ರೆ ನೋಡೋಣ: ಶಾಸಕ ಶಾಮನೂರು ಶಿವಶಂಕರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನನಗಾಲಿ ಅಥವಾ ನನ್ನ ಪುತ್ರನಿಗಾಗಲಿ ಟಿಕೆಟ್ ಕೇಳಲ್ಲ. ಪಕ್ಷದ ಹೈಕಮಾಂಡ್‌ ಮನೆಗೆ ಟಿಕೆಟ್ ತಂದು‌ಕೊಟ್ರೆ ನೋಡೋಣ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

ಬುಧವಾರ ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಮಾಜಿ ಸಚಿವ ಎಚ್‌.ಎಂ. ರೇವಣ್ಣ ಬಂದು ಸ್ಪರ್ಧಿಸುವುದಿದ್ದರೂ ಸ್ಪರ್ಧಿಸಲಿ. ಟಿಕೆಟ್‌ ಯಾರಿಗೆ ಎಂಬುದನ್ನು ಪಕ್ಷದ ವರಿಷ್ಠರು ಸ್ಪಷ್ಟಪಡಿಸಲಿದ್ದಾರೆ. ಯಾರೇ ನಿಂತರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ಎಲ್ಲರೂ ಕೆಲಸ ಮಾಡೋಣ. ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ 50 ಸಾವಿರ ಮತಗಳ ಲೀಡ್‌ ಕೊಡುವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಲಿಂಗಾಯತ– ವೀರಶೈವ ಒಂದೇ: ಮತ್ತೆ ಲೋಕ ಸಭೆ ಚುನಾವಣೆ ಬಂದ ಹಿನ್ನಲೆಯಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಶುರುವಾಗಿದೆ. ಇದರಿಂದ ಏನೂ ಆಗಲ್ಲ. ಹಾಗೆ ಹೋರಾಟ ಮಾಡುವರು ಅಲ್ಲಿಯೇ ಸಾಯುತ್ತಾರೆ. ಲಿಂಗಾಯತ ವೀರಶೈವ ಎರಡೂ ಒಂದೇ ಎಂದು ಅಖಿಲ ಭಾರತ ವೀರಶೈವ ಮಹಾ ಸಭೆಯ ಅಧ್ಯಕ್ಷರೂ ಆಗಿರುವ ಶಾಮನೂರು ಶಿವಶಂಕರಪ್ಪ ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು