ಕಾಂಗ್ರೆಸ್‌ನವರನ್ನು ಸೆಳೆದರೆ ಮುಯ್ಯಿಗೆ ಮುಯ್ಯಿ ತೀರಿಸುತ್ತೇವೆ: ಶಾಮನೂರು

7

ಕಾಂಗ್ರೆಸ್‌ನವರನ್ನು ಸೆಳೆದರೆ ಮುಯ್ಯಿಗೆ ಮುಯ್ಯಿ ತೀರಿಸುತ್ತೇವೆ: ಶಾಮನೂರು

Published:
Updated:
Deccan Herald

ದಾವಣಗೆರೆ: ‘ಬಿಜೆಪಿಗೆ ಜಾರಕಿಹೊಳಿಯೂ ಹೋಗುವುದಿಲ್ಲ; ಶಿವಶಂಕರಪ್ಪನೂ ಹೋಗುವುದಿಲ್ಲ. ಅಲ್ಲಿಗೆ ಯಾವ ಅಪ್ಪನೂ ಹೋಗುವುದಿಲ್ಲ. ಇದೆಲ್ಲಾ ಸುಳ್ಳು ಸುದ್ದಿ’ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಪ್ರತಿಕ್ರಿಯಿಸಿದರು.

‘ರೆಫೆಲ್‌ ಹಗರಣ’ ಖಂಡಿಸಿ ಕಾಂಗ್ರೆಸ್‌ ಪಕ್ಷ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಅವರ ಕಡೆಯವರೇ ಕಾಂಗ್ರೆಸ್‌ ಸೇರಲು ತುದಿಗಾಲ ಮೇಲೆ ನಿಂತಿದ್ದಾರೆ. ಅವರು ಏನಾದರು ನಮ್ಮವರ ಕಡೆಗೆ ಕೈ ಹಾಕಿದರೆ, ನಾವೂ ಅವರ ಕಡೆಯವರನ್ನು ಕರೆದುಕೊಂಡು ಬಂದು ಮುಯ್ಯಿಗೆ ಮುಯ್ಯಿ ತೀರಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

‘ತಮ್ಮನ್ನು ಬಿಜೆಪಿಯವರು ಸಂಪರ್ಕಿಸಿದ್ದಾರೆಯೇ’ ಎಂಬ ಪ್ರಶ್ನೆಗೆ, ‘ಈ ವಿಚಾರವಾಗಿ ನನ್ನನ್ನು ಅವರ ಅಪ್ಪನ ಕೈಯಿಂದಲೂ ಕಾಂಟೆಕ್ಟ್‌ ಮಾಡಲು ಆಗುವುದಿಲ್ಲ. ನನ್ನನ್ನು ಕಾಂಟೆಕ್ಟ್‌ ಮಾಡಲು ಅವರಿಗೆ ಧೈರ್ಯ ಬೇಕಲ್ಲ? ಈ ಬಗ್ಗೆ ಪೇಪರ್‌ನಲ್ಲಿ ಹಾಕಿಸುತ್ತಾರೆ, ಅಷ್ಟೆ’ ಎಂದು ತೀಕ್ಷ್ಣವಾಗಿ ಉತ್ತರಿಸಿದರು.

‘ಶಾಸಕ ಬಿ.ಸಿ. ಪಾಟೀಲ ಸೇರಿ ಎಂಟು ಜನ ಬಿಜೆಪಿ ಕಡೆ ಹೋಗಿದ್ದಾರೆ ಎಂಬ ವದಂತಿ ಇದೆಯಲ್ಲ’ ಎಂಬ ಕುರಿತು ಗಮನ ಸೆಳೆದಾಗ, ‘ಕಾಂಗ್ರೆಸ್‌ನಿಂದ ಯಾರೂ ಹೋಗಿಲ್ಲ. ಸುಮ್ಮನೆ ಸುಳ್ಳು ಹೇಳುತ್ತಾರೆ’ ಎಂದರು.

ಸಚಿವ ಸಂಪುಟ ವಿಸ್ತರಣೆ ವೇಳೆ ತಮಗೆ ಅವಕಾಶ ಸಿಗುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ, ‘ಸಚಿವ ಸ್ಥಾನ ಬರಲಿ, ಬಾರದೇ ಇರಲಿ. ಕೆಲಸ ಮಾಡಿಸುವ ನನಗೆ ಶಕ್ತಿ ಇದೆ. ಅದರ ಮೇಲೆ ಡಿಪೆಂಡ್‌ ಆಗಿಲ್ಲ’ ಎಂದು ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !