ಎರಡು ಜೀವಂತ ಚಿಪ್ಪು ಹಂದಿಗಳ ವಶ: ಬಂಧನ

7

ಎರಡು ಜೀವಂತ ಚಿಪ್ಪು ಹಂದಿಗಳ ವಶ: ಬಂಧನ

Published:
Updated:
Deccan Herald

ಬಾಳೆಹೊನ್ನೂರು: ಪಟ್ಟಣ ಸಮೀಪದ ಹಲಸೂರು ಅರಣ್ಯದಲ್ಲಿ ಅಪರೂಪದ ಎರಡು ಚಿಪ್ಪು ಹಂದಿಗಳನ್ನು ಹಿಡಿದು ಸಾಗಣೆ ಮಾಡಲು ಯತ್ನಿಸುತ್ತಿದ್ದ ಆರೋಪದ ಮೇಲೆ ಶುಕ್ರವಾರ ಅರಣ್ಯ ಇಲಾಖೆ ಅಧಿಕಾರಿಗಳು ಒಬ್ಬನನ್ನು ಬಂಧಿಸಿ, ಬೈಕ್ ವಶಪಡಿಸಿಕೊಂಡಿದ್ದಾರೆ.

ಹಲಸೂರು ಬಳಿಯ ಕಬ್ಬಿನಮಣ್ಣಿನ ಪ್ರದೀಪ್ ಬಂಧಿತ ಆರೋಪಿ. ಗುರುವಾರ ರಾತ್ರಿ ಕಬ್ಬಿನಮಣ್ಣು ಮೀಸಲು ಅರಣ್ಯದಲ್ಲಿ ಬೈಕ್ ಮೇಲೆ ಎರಡು ಗೋಣಿ ಚೀಲಗಳಲ್ಲಿ ಚಿಪ್ಪು ಹಂದಿಗಳನ್ನು ತುಂಬಿಸಿಕೊಂಡು ಮಾರಾಟಕ್ಕಾಗಿ ಹೊರಗಡೆಗೆ ತೆರಳುತ್ತಿದ್ದಾಗ ಅರಣ್ಯ ಇಲಾಖೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. ಇನ್ನೊಬ್ಬ ಆರೋಪಿ ಪ್ರಕಾಶ್ ತಪ್ಪಿಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ನಡೆಯುತ್ತಿದೆ.

ಅತಿದೊಡ್ಡ ಚಿಪ್ಪು ಹಂದಿ: ಇದುವರೆಗೆ ರಾಜ್ಯದಲ್ಲಿ ಪತ್ತೆಯಾದ ಚಿಪ್ಪು ಹಂದಿಗಳಲ್ಲಿ ಇದು ದೊಡ್ಡದು ಎನ್ನಲಾಗುತ್ತಿದೆ. ಒಂದು ಗಂಡು ಹಾಗೂ ಒಂದು ಹೆಣ್ಣು ಚಿಪ್ಪು ಹಂದಿ ಪತ್ತೆಯಾಗಿದ್ದು, ಕ್ರಮವಾಗಿ 18.5 ಹಾಗೂ 8.5 ಕೆ.ಜಿ. ತೂಕ ಇವೆ.

‘ಚಿಪ್ಪು ಹಂದಿಗಳು ಅಳಿವಿನ ಅಂಚಿನಲ್ಲಿರುವ ಪ್ರಾಣಿ ಸಂಕುಲವಾಗಿದ್ದು ಅವುಗಳನ್ನು ಅಕ್ರಮವಾಗಿ ಹಿಡಿದು ವಿದೇಶಗಳಿಗೆ ಮಾರಾಟ ಮಾಡುವ ದೊಡ್ಡ ಜಾಲವೇ ಇದೆ. ಇದರ ಮೂಲವನ್ನು ಪತ್ತೆ ಹಚ್ಚಿ ಕಾನೂನಿನ ಅನ್ವಯ ಕ್ರಮ ಕೈಗೊಳ್ಳಲಾಗುವುದು’ ಎಂದು ಕೊಪ್ಪದ ಡಿಸಿಎಫ್ ತಾಕತ್ ಸಿಂಗ್ ರಣಾವತ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !