ಜೋಗ ಪ್ರವಾಹಕ್ಕೆ ಧರೆಗುರುಳಿದ 11 ಕೆ.ವಿ ವಿದ್ಯುತ್ ಕಂಬಗಳು

7

ಜೋಗ ಪ್ರವಾಹಕ್ಕೆ ಧರೆಗುರುಳಿದ 11 ಕೆ.ವಿ ವಿದ್ಯುತ್ ಕಂಬಗಳು

Published:
Updated:

ಕಾರ್ಗಲ್: ಇಲ್ಲಿಗೆ ಸಮೀಪದ ಬಾಂಬೆ ಟಿಬಿ ಪ್ರವಾಸಿ ಬಂಗಲೆ ಮತ್ತು ಸುತ್ತ ಮುತ್ತಲ ಮಾವಿನಗುಂಡಿ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ನೀಡುತ್ತಿದ್ದ 11 ಕೆವಿ ವಿದ್ಯುತ್ ಕಂಬಗಳು ಜಲಪಾತದ ಮೇಲಿನ ಶರಾವತಿ ನದಿ ಪ್ರವಾಹಕ್ಕೆ ಧರೆಗುರುಳಿ ಬಿದ್ದಿರುವ ಬಗ್ಗೆ ಶುಕ್ರವಾರ ವರದಿಯಾಗಿದೆ.

ಪ್ರವಾಸಿ ಬಂಗಲೆ ಸಮೀಪದ ಟ್ರಾನ್ಸ್‌ಫಾರ್ಮರ್ ಪಕ್ಕದಲ್ಲಿದ್ದ ಹಳೆಯದಾದ ಕಂಬಗಳು ಸೇರಿದಂತೆ ರಾಜಾ ಜಲಪಾತದ ಪಕ್ಕದಲ್ಲಿ ಹಾದು ಬಂದಿದ್ದ ವಿದ್ಯುತ್ ಕಂಬಗಳು ಪ್ರವಾಹಕ್ಕೆ ತುತ್ತಾಗಿರುವ ಕಾರಣ, ಬಾಂಬೆ ಟಿಬಿ ಮತ್ತು ಸಮೀಪದ ಗ್ರಾಮಗಳಲ್ಲಿ 2 ದಿನಗಳಿಂದ ಕತ್ತಲು ಆವರಿಸಿದೆ.

ಸಂಬಂಧಪಟ್ಟ ಮೆಸ್ಕಾಂ ಕೂಡಲೇ ಸ್ಪಂದಿಸಿ ವಿಶ್ವ ಪ್ರಸಿದ್ಧ ಪ್ರವಾಸಿ ತಾಣಕ್ಕೆ ಮತ್ತು ಗ್ರಾಮಗಳಿಗೆ ವಿದ್ಯುತ್ ವ್ಯವಸ್ಥೆ ಒದಗಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಮೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರವಾಹ ಮತ್ತು ನಿರಂತರ ಸುರಿ ಯುತ್ತಿರುವ ಮಳೆಯಿಂದಾಗಿ ಕೆಲಸ ಕಾರ್ಯಗಳಿಗೆ ಅಡ್ಡಿಯಾಗಿದ್ದು, ಕೂಡಲೇ ದುರಸ್ತಿ ಕಾರ್ಯ ಕೈಗೊಂಡು ಸರಿಪಡಿಸಿಕೊಡುವ ಭರವಸೆ
ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !