‘ಶಿರಾಡಿ ಸಂಚಾರ 4 ತಿಂಗಳು ಕಷ್ಟ’

7
ಶಿರಾಡಿ ಸಂಚಾರ: ಇನ್ನಷ್ಟು ದಿನ ಅನುಮಾನ

‘ಶಿರಾಡಿ ಸಂಚಾರ 4 ತಿಂಗಳು ಕಷ್ಟ’

Published:
Updated:
Deccan Herald

ಹಾಸನ: ಭಾರಿ ಮಳೆಯಿಂದ ಶಿರಾಡಿ ಘಾಟ್ ಮಾರ್ಗದಲ್ಲಿ ಪದೇ ಪದೇ ಗುಡ್ಡ ಕುಸಿಯುತ್ತಿರುವುದರಿಂದ ರಸ್ತೆ ಹಾಳಾಗಿದ್ದು, ಮುಂದಿನ 4 ರಿಂದ 5 ತಿಂಗಳು ಭಾರಿ ವಾಹನಗಳ ಸಂಚಾರ ಕಷ್ಟ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.

ಹೊಳೆನರಸೀಪುರದಲ್ಲಿ ಭಾನುವಾರ ಮಾತನಾಡಿದ ಅವರು, ‘ಹೊಸ ಕಾಂಕ್ರೀಟೀಕರಣ ರಸ್ತೆಯಾದ ನಂತರ ಜೋರು ಮಳೆ ಶುರುವಾಗಿದೆ. ಅದಾದ ಬಳಿಕ ಅನೇಕ ಕಡೆ ಗುಡ್ಡ ಕುಸಿಯುತ್ತಿದೆ. ಹೀಗಾಗಿ ಶಿರಾಡಿ ಮಾರ್ಗದಲ್ಲಿ ವಾಹನ ಸಂಚಾರ ಅದರಲ್ಲೂ ದೊಡ್ಡ ವಾಹನಗಳ ಸಂಚಾರ ಕಷ್ಟ. ಮುಂದಿನ ದಿನಗಳಲ್ಲಿ ಈ ಬಗ್ಗೆ ಪರಿಶೀಲಿಸಿ ವಾಹನ ಓಡಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಳ್ಳಲಾಗುವುದು’ ಎಂದು ವಿವರಿಸಿದರು.

ಹಾಸನ ಹಾಗೂ ಕೊಡಗಿನಲ್ಲಿ ಮಳೆ ಹಾನಿ ಸಂಬಂಧ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ಅಂದಾಜು ₹150 ಕೋಟಿ ನಷ್ಟವಾಗಿದೆ. ₹139 ಕೋಟಿ ರಸ್ತೆ ಹಾನಿಯಾಗಿದೆ. ₹8 ಕೋಟಿ ವೆಚ್ಚದ ಸೇತುವೆ ಹಾಗೂ ₹2 ಕೋಟಿ ವೆಚ್ಚದ ಕಟ್ಟಡ ಹಾಳಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮಳೆ ಹೀಗೆ ಮುಂದುವರಿದರೆ, ಮತ್ತಷ್ಟು ಹಾನಿಯಾಗುವ ಸಂಭವವಿದೆ. ಮಳೆ ನಿಂತ ನಂತರ ದುರಸ್ತಿ ಕಾಮಗಾರಿ ಆರಂಭಿಸಲಾಗುವುದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !