ಸಿದ್ದರಾಮಯ್ಯ ಹೇಳಿಕೆಗೆ ಡಿಕೆಶಿ ಕಿಡಿ

7
ವ್ಯಕ್ತಿಪೂಜೆ ಬೇಡ, ಪಕ್ಷಕ್ಕೆ ಆದ್ಯತೆ ಕೊಡಿ

ಸಿದ್ದರಾಮಯ್ಯ ಹೇಳಿಕೆಗೆ ಡಿಕೆಶಿ ಕಿಡಿ

Published:
Updated:

ಬೆಂಗಳೂರು: ‘ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಐದು ವರ್ಷ ಅಧಿಕಾರದಲ್ಲಿ ಇರುತ್ತದೆ. ಯಾರು ಪಕ್ಷದ ವಿರುದ್ಧ ಯಾರೂ ಮಾತನಾಡುವಂತಿಲ್ಲ. ಇದು ಡಿ.ಕೆ. ಶಿವಕುಮಾರ್‌ಗೂ ಅನ್ವಯಿಸುತ್ತೆ. ಎಲ್ಲರಿಗೂ ಅನ್ವಯಿಸುತ್ತೆ’ ಎಂದು ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.

ಸದಾಶಿವನಗರದ ತಮ್ಮ ನಿವಾಸದಲ್ಲಿ ಇಂದು (ಬುಧವಾರ) ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ‘ವ್ಯಕ್ತಿ ಪೂಜೆ ನಿಲ್ಲಿಸಿ. ಪಕ್ಷದ ಪೂಜೆ ಮಾಡಿ’ ಎಂದು ಕಿವಿಮಾತು ಹೇಳಿದರು.

‘ಸಮ್ಮಿಶ್ರ ಸರ್ಕಾರ ಐದು ವರ್ಷ ಇರಬೇಕು ಎಂದು ರಾಹುಲ್ ಗಾಂಧಿಯವರೇ ಹೇಳಿದ್ದಾರೆ. ಮತ್ತೊಂದು ಪಕ್ಷದ 37 ಸ್ಥಾನವನ್ನು ನಾವು ಲೆಕ್ಕಿಸಿಲ್ಲ. 224 ಸ್ಥಾನಗಳನ್ನು ಮನಸಿನಲ್ಲಿ ಇಟ್ಟುಕೊಂಡು ಮೈತ್ರಿ ಮಾಡಿಕೊಂಡಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

‘ಸಿದ್ದರಾಮಯ್ಯ ಅವರ ಮಾತನ್ನು ಯಾರೋ ಕಿಡಿಗೇಡಿಗಳು ವಿಡಿಯೊ ಮಾಡಿ, ಮಾಧ್ಯಮಗಳಿಗೆ ಕೊಟ್ಟಿದ್ದಾರೆ. ವಿಡಿಯೊದಲ್ಲಿರುವ ಮಾತುಗಳನ್ನು ಅಧಿಕೃತ ಎಂದು ಒಪ್ಪಿಕೊಳ್ಳಲು ಆಗದು. ರಾಹುಲ್ ಮತ್ತು ವೇಣುಗೋಪಾಲ್ ಅವರು ಈ ಸರ್ಕಾರ ಐದು ವರ್ಷ ಇರಬೇಕು ಎಂದು ಒಪ್ಪಿಗೆ ಕೊಟ್ಟಿರುವುದು ಅಧಿಕೃತ’ ಎಂದು ನುಡಿದರು.

‘ಮಂಡ್ಯದಲ್ಲಿ ಜೆಡಿಎಸ್–ಕಾಂಗ್ರೆಸ್ ಮೈತ್ರಿ ಸಾಧ್ಯವಿಲ್ಲ’ ಎಂಬ ಚೆಲುವರಾಯಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಶಿವಕುಮಾರ್, ‘ವ್ಯಕ್ತಿ ಮುಖ್ಯವಲ್ಲ. ಪಕ್ಷ ಮುಖ್ಯ’ ಎಂದರು.

‘ಮೈತ್ರಿ ವಿಚಾರದಲ್ಲಿ ಯಾರು ಮಾತನಾಡುವುದು ಬೇಡ. ನಾನು–ನೀನು ಅನ್ನೋದು ಬೇಡ.  ಸಿದ್ದರಾಮಯ್ಯ ಅವರ ಮಾತಿನಿಂದ ಸರ್ಕಾರದ ಮೇಲೆ ಯಾವುದೇ ಪರಿಣಾಮ ಆಗಲ್ಲ. ಸರ್ಕಾರಿ ನೌಕರರ ವರ್ಗಾವಣೆಗಳಲ್ಲಿ ಯಾವುದೇ ತೊಂದರೆ ಆಗಿಲ್ಲ. ಕೇಳಿದ ಅಧಿಕಾರಿಯನ್ನ ಮುಖ್ಯಮಂತ್ರಿ ಹಾಕಿಕೊಟ್ಟಿದ್ದಾರೆ’ ಎಂದು ನುಡಿದರು.

‘ಬಜೆಟ್ ದಿನ ನಾನು ಬೆಂಗಳೂರಿನಲ್ಲಿ ಇರುವುದು ಕಷ್ಟ. ಅಂದು ನೊಣವಿನಕೆರೆ ಮಠದಲ್ಲಿ ಸಮಾರಂಭವಿದೆ. ಅಲ್ಲಿಗೆ ರಾಜ್ಯಪಾಲರು ಬರುತ್ತಿದ್ದಾರೆ. ನಾನು ಮಠದ ಕಾರ್ಯಾಧ್ಯಕ್ನನಾಗಿ ನಾನು ಕೆಲಸ ಮಾಡುತ್ತಿದ್ದೇನೆ. ಒಂದು ವೇಳೆ ನಾನು ವಿಧಾನಸೌಧದಲ್ಲಿ ಕಾಣಿಸದಿದ್ದರೆ ಅದನ್ನು ದೊಡ್ಡದು ಮಾಡುವುದು ಬೇಡ ಎಂದು ಮೊದಲೇ ಹೇಳುತ್ತಿದ್ದೇನೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 45

  Happy
 • 4

  Amused
 • 4

  Sad
 • 3

  Frustrated
 • 13

  Angry

Comments:

0 comments

Write the first review for this !