ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ಲಕ್ಷ ಜನರಿಗೆ ಪ್ರಸಾದ ವ್ಯವಸ್ಥೆ

Last Updated 21 ಜನವರಿ 2019, 17:53 IST
ಅಕ್ಷರ ಗಾತ್ರ

ತುಮಕೂರು: ಅಂತಿಮ ದರ್ಶನಕ್ಕೆ ಬರುವ 5 ಲಕ್ಷ ಭಕ್ತರಿಗೆ ನಗರದ ಅಕ್ಕಿ ಗಿರಣಿ ಮಾಲೀಕರ ಸಂಘ ಸೇರಿದಂತೆ ವಿವಿಧ ವ್ಯಾಪಾರಿ ಸಂಘಟನೆಗಳು ಪ್ರಸಾದ ವ್ಯವಸ್ಥೆ ಮಾಡಿವೆ. ತುಮಕೂರು ನಗರ ಮತ್ತು ಕ್ಯಾತ್ಸಂದ್ರದಲ್ಲಿ60ಕ್ಕೂ ಹೆಚ್ಚು ಕೌಂಟರ್‌ಗಳನ್ನು ತೆರೆದಿದ್ದಾರೆ.

* ಬಾಲ್ಯದಿಂದಲೇ ವಿರಕ್ತಿ ಮಾರ್ಗವನ್ನು ಅನುಸರಿಸಿದ ಶಿವಕುಮಾರ ಸ್ವಾಮೀಜಿ ಆತ್ಮೋನ್ನತಿಗಾಗಿ ಪೂಜೆ, ಧ್ಯಾನ, ತಪಸ್ಸು. ಸಮಾಜ ಮತ್ತು ದೇಶದ ಕಲ್ಯಾಣಕ್ಕಾಗಿ ದೇಹವನ್ನು ಕೊರಡಿನಂತೆ ಸವೆಸಿದರು’

-ಡಿ.ವೀರೇಂದ್ರ ಹೆಗ್ಗಡೆ, ಧರ್ಮಸ್ಥಳದ ಧರ್ಮಾಧಿಕಾರಿ

* ತಮ್ಮ ಧರ್ಮ ಬೋಧನೆಗಳ ಮೂಲಕ ಜನರನ್ನು ಜಾಗೃತರನ್ನಾಗಿಸುತ್ತಿದ್ದ ಶಿವಕುಮಾರ ಸ್ವಾಮೀಜಿ ಅವರು, ಆಧ್ಯಾತ್ಮಿಕ ಮುನ್ನಡೆಯ ಜತೆ ಜತೆಗೆ ಸಮಕಾಲೀನ ಬದುಕಿಗೆ ಅವಶ್ಯವಾದ ಆಧುನಿಕ ಶಿಕ್ಷಣಕ್ಕೂ ಒತ್ತು ನೀಡಿ ಜನರ ಸಮೃದ್ಧ ಬದುಕಿಗೆ ಬುನಾದಿಯನ್ನು ಒದಗಿಸಿದ್ದರು.

-ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠ

* ‘ಶಿವಕುಮಾರ ಸ್ವಾಮೀಜಿ ಸಿದ್ಧಗಂಗೆಯನ್ನು ಜ್ಞಾನಗಂಗೆಯನ್ನಾಗಿ ಮಾಡಿದ ದೇಶ ಕಂಡ ಶ್ರೇಷ್ಠ ಸಂತ. ‘ಭಾರತ ಗೌರವ’ದಂತೆ ಇದ್ದರು. ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿ, ಲಕ್ಷಾಂತರ ಜನರ ವಿದ್ಯಾಭ್ಯಾಸಕ್ಕೆ ದಾರಿದೀಪವಾಗಿದ್ದರು’

-ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ,ಶ್ರವಣಬೆಳಗೊಳ ಜೈನಮಠ

* ಶಿವಕುಮಾರ ಸ್ವಾಮೀಜಿ ಅವರು ಶ್ರೇಷ್ಠ ಆಧ್ಯಾತ್ಮಿಕ ನಾಯಕ, ಮಾನವತಾವಾದಿ ಹಾಗೂ ಶಿಕ್ಷಣತಜ್ಞ. ಲಕ್ಷಾಂತರ ಮಕ್ಕಳಿಗೆ ಶಿಕ್ಷಣ ಕೊಡಿಸಿದ ಸಂತ ಅವರು.

-ರೆ.ಫಾ.ಪೀಟರ್‌ ಮಚಾದೊ, ಬೆಂಗಳೂರಿನ ಆರ್ಚ್‌ ಬಿಷಪ್‌

* ‘ನನ್ನ ಜೀವನವೇ ಸಂದೇಶ’ ಎನ್ನುವಂತೆ ಬದುಕಿದ ಶ್ರೀಗಳು, ಕಾಯಕ ಯೋಗಿಯಾಗಿ ಬಸವಣ್ಣನವರ ಆದರ್ಶಗಳನ್ನು ಸ್ವತಃ ಮೈಗೂಡಿಸಿಕೊಂಡಿದ್ದರು. ಶ್ರೀಗಳ ಸೇವೆಯನ್ನು ಪರಿಗಣಿಸಿ, ಭಾರತರತ್ನ ಪ್ರಶಸ್ತಿ ನೀಡಬೇಕು ಎಂದು ಪ್ರಧಾನಿಗೆ ಈಗಾಗಲೇ ಮನವಿ ಮಾಡಿದ್ದೇನೆ. ಮತ್ತೊಮ್ಮೆ ಮನವಿ ಮಾಡುತ್ತೇನೆ.

-ಬಿ.ಎಸ್‌. ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ

* 80 ವರ್ಷಗಳ ಕಾಲ ಸಿದ್ಧಗಂಗೆ ಕ್ಷೇತ್ರವನ್ನು ಕೇಂದ್ರವಾಗಿಸಿಕೊಂಡು ಲಕ್ಷಾಂತರ ಭಕ್ತರ ಆರಾಧ್ಯದೈವವಾಗಿ ಬಡ ಮಕ್ಕಳ‌ ಆಶ್ರಯದಾತರಾಗಿ ವಿದ್ಯಾದಾನ, ಅನ್ನದಾನ, ಜ್ಞಾನದಾನದ ಮೂಲಕ ವಿಶ್ವಕ್ಕೆ ಮಾದರಿಯಾಗಿ ಬದುಕಿದ ಶ್ರೀಗಳು ಜಗತ್ತಿನ ಶ್ರೇಷ್ಠ ಸಂತ, ತ್ರಿವಿಧ ದಾಸೋಹಿ.

- ಎಸ್. ಎಂ. ಕೃಷ್ಣ, ಮಾಜಿ ಮುಖ್ಯಮಂತ್ರಿ

* ಶಿವಕುಮಾರ ಸ್ವಾಮೀಜಿ ಅವರ ಅಗಲಿಕೆ ದೇಶಕ್ಕೆ ತುಂಬಲಾಗದ ನಷ್ಟ. ಅನ್ನ, ಅಕ್ಷರ, ಆಸರೆಗಳೆಂಬ ತ್ರಿವಿಧ ದಾಸೋಹದ ಸೇವೆ ಸದಾ ಸ್ಮರಣೀಯ.

- ಕೆ.ಸಿ. ವೇಣುಗೋಪಾಲ್‌, ಕಾಂಗ್ರೆಸ್‌ ರಾಜ್ಯ ಉಸ್ತುವಾರಿ

* ನಾನು ಬಸವಣ್ಣ ಅವರನ್ನು ಕಣ್ಣಾರೆ ನೋಡಿಲ್ಲ. ನಾನು ಶಿವಕುಮಾರ ಸ್ವಾಮೀಜಿ ಅವರಲ್ಲಿ ಬಸವಣ್ಣನನ್ನು ಕಾಣುತ್ತಿದ್ದೆ. ನನ್ನ ಪಾಲಿಗೆ ಅವರು ‘ನಡೆದಾಡುವಬಸವಣ್ಣ’ ಆಗಿದ್ದರು. ಅವರಿಗೆ ಭಾರತರತ್ನನೀಡಿದ್ದರೆ ಪ್ರಶಸ್ತಿಯ ಗೌರವ ಹೆಚ್ಚುತ್ತಿತ್ತು.

-ಸಿದ್ದರಾಮಯ್ಯ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT