ಸ್ವಾಮೀಜಿ ಹಠ; ಮಠಕ್ಕೆ ಸ್ಥಳಾಂತರ

7

ಸ್ವಾಮೀಜಿ ಹಠ; ಮಠಕ್ಕೆ ಸ್ಥಳಾಂತರ

Published:
Updated:

ತುಮಕೂರು: ಸ್ವಾಮೀಜಿಯವರು ರಾತ್ರಿ ಮಠಕ್ಕೆ ಹೋಗಬೇಕೆಂದು ಬಹಳ ಹಠ ಮಾಡಿದ್ದರಿಂದ ಮಠಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಸಿದ್ದಗಂಗಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸ್ವಾಮೀಜಿ ಆಪ್ತ ವೈದ್ಯ ಡಾ.ಪರಮೇಶ್ ಹೇಳಿದ್ದಾರೆ.

ಮಠಕ್ಕೆ ಸ್ಥಳಾಂತರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸ್ವಾಮೀಜಿಯವರ ಆರೋಗ್ಯದಲ್ಲಿ ಯಾವುದೇ ರೀತಿ ವ್ಯತ್ಯಾಸಗಳಿಲ್ಲ. ಸ್ಥಿರವಾಗಿದೆ. ಸೋಂಕು ಕಡಿಮೆಯಾಗಿದೆ. ನಾವು ಬುಧವಾರ ಅಥವಾ ಗುರುವಾರ ಮಠಕ್ಕೆ ಸ್ಥಳಾಂತರ ಮಾಡಬೇಕು ಎಂಬ ಉದ್ದೇಶವಿತ್ತು. ಆದರೆ, ತಡರಾತ್ರಿ ಸ್ವಾಮೀಜಿ ಅವರು ಮಠಕ್ಕೆ ಹೋಗಬೇಕು ಎಂದು ಹಠ ಮಾಡಿದರು. ಹೀಗಾಗಿ ಸ್ಥಳಾಂತರ ಮಾಡಲಾಗಿದೆ ಎಂದು ಹೇಳಿದರು.

ಆಸ್ಪತ್ರೆಯಲ್ಲಿ ಹೇಗೆ ಚಿಕಿತ್ಸೆ ನಡೆಯುತ್ತಿತ್ತೊ ಅದೇ ರೀತಿ ಮಠದಲ್ಲೂ ಸ್ವಾಮೀಜಿ ಅವರಿಗೆ ಚಿಕಿತ್ಸೆ ಮುಂದುವರಿಸಲಾಗುತ್ತದೆಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 18

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !