ಸಚಿವರಾಗಲು ಶಿವರಾಮ ಹೆಬ್ಬಾರ ಅರ್ಹರು: ಆರ್.ವಿ.ದೇಶಪಾಂಡೆ

7

ಸಚಿವರಾಗಲು ಶಿವರಾಮ ಹೆಬ್ಬಾರ ಅರ್ಹರು: ಆರ್.ವಿ.ದೇಶಪಾಂಡೆ

Published:
Updated:

ಕಾರವಾರ: ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಯುವಕರು. ಅವರಿಗೆ ಸಚಿವ ಸ್ಥಾನ ಯಾಕೆ ಸಿಗಬಾರದು? ಅವರು ಅರ್ಹರಿದ್ದಾರೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಪುನರುಚ್ಛರಿಸಿದರು.

ಗಾಂಧಿ ಜಯಂತಿ ಅಂಗವಾಗಿ ತಾಲ್ಲೂಕಿನ ಮಾಜಾಳಿ ಕಡಲತೀರದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಹೆಬ್ಬಾರರೂ ಸಚಿವರಾದರೆ ಜಿಲ್ಲೆಗೆ ಇಬ್ಬರು ಸಚಿವರಾಗ್ತಾರಲ್ಲ ಎಂದು ಪತ್ರಕರ್ತರು ಕೇಳಿದಾಗ, 'ಜಿಲ್ಲೆಗೆ ಇಬ್ಬರು ಸಚಿವರು ಯಾಕೆ ಆಗಬಾರದು? ವಿಜಯಪುರ ಜಿಲ್ಲೆಯಲ್ಲಿ ಇಬ್ಬರಿಲ್ಲವೇ' ಎಂದು ಪ್ರಶ್ನಿಸಿದರು.


ಸ್ವಚ್ಛತಾ ಕಾರ್ಯಕ್ರಮದಲ್ಲಿ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಸಾರ್ವಜನಿಕರು ಭಾಗವಹಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !