ಮಧ್ಯಂತರ ಚುನಾವಣೆ ಕೇವಲ ಬ್ಲ್ಯಾಕ್‌ಮೇಲ್‌ ತಂತ್ರ: ಶಾಸಕ ಬಿ.ಶ್ರೀರಾಮುಲು ಆರೋಪ

ಗುರುವಾರ , ಜೂಲೈ 18, 2019
22 °C

ಮಧ್ಯಂತರ ಚುನಾವಣೆ ಕೇವಲ ಬ್ಲ್ಯಾಕ್‌ಮೇಲ್‌ ತಂತ್ರ: ಶಾಸಕ ಬಿ.ಶ್ರೀರಾಮುಲು ಆರೋಪ

Published:
Updated:
Prajavani

ಚಿತ್ರದುರ್ಗ: ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಪಕ್ಷಗಳ ನಡುವಿನ ಕಿತ್ತಾಟದಿಂದ ರಾಜ್ಯ ಸರ್ಕಾರಕ್ಕೆ ಉಂಟಾಗಿರುವ ಹಾನಿಯನ್ನು ಮುಚ್ಚಿಕೊಳ್ಳಲು ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಉರುಳಿಸಿದ ಮಧ್ಯಂತರ ಚುನಾವಣೆ ದಾಳವು ಬ್ಲ್ಯಾಕ್‌ಮೇಲ್‌ ತಂತ್ರವಾಗಿದೆ ಎಂದು ಬಿಜೆಪಿ ಶಾಸಕ ಬಿ.ಶ್ರೀರಾಮುಲು ಆರೋಪಿಸಿದರು.

ಇದನ್ನೂ ಓದಿ... ಈಗೇಕೆ ಸಿಡಿಯಿತು ದೇವೇಗೌಡರ ‘ಮಧ್ಯಂತರ ಚುನಾವಣೆ’ ಬಾಂಬ್

‘ದೇವೇಗೌಡರು ಯೋಚಿಸಿ ಈ ಹೇಳಿಕೆ ನೀಡಿದ್ದಾರೆ. ಈಗಿರುವ ಪರಿಸ್ಥಿತಿಯಲ್ಲಿ ಯಾರಿಗೂ ಚುನಾವಣೆ ಬೇಕಿಲ್ಲ. ಸಮ್ಮಿಶ್ರ ಸರ್ಕಾರಕ್ಕೆ ಶೀಘ್ರದಲ್ಲೇ ಗಂಡಾಂತರ ಎದುರಾಗಲಿದೆ. ಸರ್ಕಾರದ ಒಳಜಗಳ ದೇವೇಗೌಡ ಹಾಗೂ ಸಿದ್ದರಾಮಯ್ಯ ಅವರ ಕೈಮೀರಿ ಬೆಳೆದಿದೆ’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದರು.

‘ರಮೇಶ ಜಾರಕಿಹೊಳಿ ಸೇರಿ ಹಲವು ಕಾಂಗ್ರೆಸ್‌ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ. ಬಿಜೆಪಿ ಜೊತೆಗೆ ಬರಲು ಅವರಿಗೆ ಹಿಂಜರಿಕೆ ಇಲ್ಲ. ಆದರೆ, ಬಿಜೆಪಿ ಯಾವ ಶಾಸಕರು ಕಾಂಗ್ರೆಸ್‌–ಜೆಡಿಎಸ್‌ ಸಂಪರ್ಕದಲ್ಲಿ ಇದ್ದಾರೆ ಎಂಬುದನ್ನು ಬಹಿರಂಗಪಡಿಸಲಿ’ ಎಂದು ಸವಾಲು ಎಸೆದರು.

ಇದನ್ನೂ ಓದಿ... ಇಷ್ಟ ಇಲ್ಲದಿದ್ದರೆ ಬೆಂಬಲ ವಾಪಸ್‌ ಪಡೆಯಿರಿ:ಕಾಂಗ್ರೆಸ್‌ಗೆ ವಿಶ್ವನಾಥ್‌ ಎಚ್ಚರಿಕೆ

ಇದಕ್ಕೆ ತಿರುಗೇಟು ನೀಡಿದ ಕಾರ್ಮಿಕ ಸಚಿವ ವೆಂಕಟರಮಣಪ್ಪ, ‘ಕಾಂಗ್ರೆಸ್‌–ಜೆಡಿಎಸ್‌ ಮಿತ್ರ ಪಕ್ಷಗಳಲ್ಲಿ ಅತೃಪ್ತರು ಯಾರೂ ಇಲ್ಲ. ಬಿಜೆಪಿಯ ಸುಮಾರು 30 ಶಾಸಕರು ನಮ್ಮ ಸಂಪರ್ಕದಲ್ಲೂ ಇದ್ದಾರೆ. ಸಮ್ಮಿಶ್ರ ಸರ್ಕಾರದೊಂದಿಗೆ ಬರಲು ಸಜ್ಜಾಗಿರುವ ಬಿಜೆಪಿ ಶಾಸಕರನ್ನು ಸ್ವಾಗತಿಸಲು ನಾವೂ ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದರು.

ಇನ್ನಷ್ಟು...

ರಾಜಕೀಯ ವಿಶ್ಲೇಷಣೆ | ‘ಸಿದ್ರಾಮು’ ಕಟ್ಟಿಹಾಕಲು ಗೌಡರ ‘ಪಟ್ಟು’

ಕುಮಾರಸ್ವಾಮಿ ಉತ್ಸಾಹ ಕುಗ್ಗಿಸಿದ ಗೌಡರ ಮಧ್ಯಂತರ ಚುನಾವಣೆ ಹೇಳಿಕೆ

ಕಾಂಗ್ರೆಸ್ ಪ್ರತಿಕ್ರಿಯೆ | ‘ದೇವೇಗೌಡರು ದೊಡ್ಡವರು, ಯೋಚನೆ ಮಾಡಿ ಮಾತಾಡ್ತಾರೆ’

ಬಿಜೆಪಿ ಪ್ರತಿಕ್ರಿಯೆ | ‘ಯೋಗ್ಯತೆ ಇಲ್ಲದಿದ್ರೆ ಪಕ್ಕಕ್ಕೆ ಹೋಗ್ಲಿ, ನಾವು ಸರ್ಕಾರ ಮಾಡ್ತೀವಿ’

ದೇವೇಗೌಡರ ಮಧ್ಯಂತರ ಚುನಾವಣೆ ಹೇಳಿಕೆ: ‘ಸರ್ಕಾರ ಎಷ್ಟ್ ದಿನ ಇರುತ್ತೋ ಗೊತ್ತಿಲ್ಲ’

ಮಧ್ಯಂತರ ಚುನಾವಣೆ ಸಂಭವ: ಯೋಗಾಭ್ಯಾಸದ ನಂತರ ದೇವೇಗೌಡ ಹೇಳಿಕೆ

‘ಮೈತ್ರಿ ಎಷ್ಟು ದಿನ ಮುಂದುವರಿಸುತ್ತೀರಿ’ ರಾಹುಲ್‌ ಗಾಂಧಿಗೆ ಸಿದ್ದರಾಮಯ್ಯ ಪ್ರಶ್ನೆ

ಸಿದ್ದರಾಮಯ್ಯ ವಿರುದ್ಧ ರಾಹುಲ್‌ಗೆ ದೇವೇಗೌಡ ದೂರು

‘ರಾಜ್ಯದ ಮೈತ್ರಿ ಸರ್ಕಾರಕ್ಕೆ ಅಪಾಯ ಇಲ್ಲ’ ಎಚ್‌.ಡಿ. ದೇವೇಗೌಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !