ಸಿದ್ಧಗಂಗಾಮಠ: ನೀರಿನ ಕೊರತೆ ವಿದ್ಯಾರ್ಥಿಗಳ ಪ್ರವೇಶ ಸ್ಥಗಿತ

ಮಂಗಳವಾರ, ಜೂನ್ 18, 2019
31 °C

ಸಿದ್ಧಗಂಗಾಮಠ: ನೀರಿನ ಕೊರತೆ ವಿದ್ಯಾರ್ಥಿಗಳ ಪ್ರವೇಶ ಸ್ಥಗಿತ

Published:
Updated:

ತುಮಕೂರು: ಭವಿಷ್ಯದಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಸಿದ್ಧಗಂಗಾ ಮಠದ ವಸತಿ ಶಾಲೆಗೆ ವಿದ್ಯಾರ್ಥಿಗಳ ದಾಖಲಾತಿಯನ್ನು ಸ್ಥಗಿತಗೊಳಿಸಲಾಗಿದೆ.

‘ಈಗಾಗಲೇ ನೀರಿನ ಸಮಸ್ಯೆ ಗಂಭೀರವಾಗಿದೆ. ಹೊಸದಾಗಿ ದಾಖಲಾಗಲು 8 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಇವರಲ್ಲಿ ಬಹುತೇಕರಿಗೆ ಪ್ರವೇಶ ದೊರೆಯಲಿದೆ. ಮತ್ತಷ್ಟು ಅರ್ಜಿಗಳು ಬಂದರೆ ಅವರನ್ನು ದಾಖಲಿಸಿಕೊಳ್ಳಬೇಕಾಗುತ್ತದೆ. ನೀರಿನ ಸಮಸ್ಯೆ ಕಾರಣಕ್ಕೆ ಹೆಚ್ಚು ವಿದ್ಯಾರ್ಥಿಗಳ ದಾಖಲಾತಿ  ಸಾಧ್ಯವಾಗುತ್ತಿಲ್ಲ. ಆದ್ದರಿಂದ 15 ದಿನ ಮುಂಚೆಯೇ ಅರ್ಜಿ ವಿತರಣೆ ಸ್ಥಗಿತಗೊಳಿಸಲಾಗಿದೆ’ ಎಂದು ಮಠದ ಆಡಳಿತಾಧಿಕಾರಿ ಎಸ್.ವಿಶ್ವನಾಥಯ್ಯ ತಿಳಿಸಿದರು.

‘ನೀರಿನ ಅಭಾವದ ಕಾರಣಕ್ಕೆ ಮಠದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಹೆಚ್ಚು ಮಕ್ಕಳನ್ನು ದಾಖಲಿಸಿಕೊಳ್ಳಲು ಆಗುತ್ತಿಲ್ಲ’ಎಂದರು.

2019–20ನೇ ಶೈಕ್ಷಣಿಕ ಸಾಲಿನ 1ರಿಂದ 7ನೇ ತರಗತಿ ಮತ್ತು 9 ಮತ್ತು 10ನೇ ತರಗತಿಗೆ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುವ ಅವಧಿ ಮುಗಿದಿದೆ ಎಂದು ಮಠದ ಆವರಣದಲ್ಲಿ ಪ್ರಕಟಣೆಗಳನ್ನು ಅಂಟಿಸಲಾಗಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 6

  Sad
 • 1

  Frustrated
 • 2

  Angry

Comments:

0 comments

Write the first review for this !