ಸಿದ್ಧಗಂಗಾಶ್ರೀ ಆರೋಗ್ಯ ಸ್ಥಿರ

7

ಸಿದ್ಧಗಂಗಾಶ್ರೀ ಆರೋಗ್ಯ ಸ್ಥಿರ

Published:
Updated:
Prajavani

ತುಮಕೂರು: ‘ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣಿಸುತ್ತಿಲ್ಲ. ಅವರ ದೇಹದಲ್ಲಿನ ಅಲ್ಬುಮಿನ್ ಪೋಷಕಾಂಶ 3.1 ಪ್ರಮಾಣದಿಂದ 2.6ಕ್ಕೆ ತಗ್ಗಿದೆ. ಎರಡು ಗಂಟೆಗೆ ಒಮ್ಮೆ ‌ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದು ಸಿದ್ಧಗಂಗಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಪರಮೇಶ್ ಮಾಹಿತಿ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶ್ವಾಸಕೋಶದಲ್ಲಿ ತುಂಬಿದ್ದ ನೀರನ್ನು ಹೊರತೆಗೆಯಲಾಗಿದೆ. ಸ್ವಾಭಾವಿಕವಾಗಿ ಶರೀರದಲ್ಲಿ ಉತ್ಪತ್ತಿ ಆಗಬೇಕಾಗಿದ್ದ ಪೋಷಕಾಂಶ, ರಕ್ತದ ಕಣಗಳು ಉತ್ಪತ್ತಿ ಆಗುತ್ತಿಲ್ಲ’ ಎಂದು ತಿಳಿಸಿದರು.

‘ಬಾಹ್ಯವಾಗಿ ಪೋಷಕಾಂಶಗಳನ್ನು ಹೆಚ್ಚು ದಿನ ನೀಡಲು ಸಾಧ್ಯವಿಲ್ಲ. ಹೀಗೆ, ಮಾಡಿದರೆ ಅಡ್ಡ ಪರಿಣಾಮಗಳಾಗು
ತ್ತವೆ. ಸ್ವಾಮೀಜಿ ಅವರಿಗೆ ದ್ರವ ರೂಪದ ಆಹಾರ ನೀಡಲಾಗುತ್ತಿದೆ’ ಎಂದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !