ಬುಧವಾರ, ಸೆಪ್ಟೆಂಬರ್ 18, 2019
25 °C

‌‌ಡಿಸೆಂಬರ್‌ನಲ್ಲಿ ಚುನಾವಣೆ: ಸಿದ್ದರಾಮಯ್ಯ ಭವಿಷ್ಯ

Published:
Updated:
Prajavani

ಮೈಸೂರು: ‌‘ಈಗಿನ ಪರಿಸ್ಥಿತಿ ನೋಡಿದರೆ ಯಡಿಯೂರಪ್ಪ ನೇತೃತ್ವದ ಸರ್ಕಾರ ಟೇಕಾಫ್‌ ಆಗುವುದು ಕಷ್ಟ. ಈ ಸರ್ಕಾರ ಮೂರೂವರೆ ವರ್ಷ ಪೂರೈಸುವುದಿಲ್ಲ. ಡಿಸೆಂಬರ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

‘ಅಧಿಕಾರದ ಆಸೆಗೆ ರಾಜೀನಾಮೆ ಕೊಟ್ಟು ಹೋಗಿರುವ ಶಾಸಕರನ್ನು ನಂಬಿಕೊಂಡು ಬಿಜೆಪಿ ಎಷ್ಟು ದಿನ ಆಡಳಿತ ನಡೆಸುತ್ತದೆ ನೋಡೋಣ. ಬಿಜೆಪಿಯಲ್ಲಿ ಅಸಮಾಧಾನ ಹೆಚ್ಚುತ್ತಿದೆ. ಮಂತ್ರಿಗಳು ಇನ್ನೂ ಕೆಲಸ ಆರಂಭಿಸಿಲ್ಲ. ರಾಜ್ಯದಲ್ಲಿ ಸರ್ಕಾರವೇ ಇಲ್ಲ’ ಎಂದು ಮೈಸೂರಿನಲ್ಲಿ ಭಾನುವಾರ ವಾಗ್ದಾಳಿ ನಡೆಸಿದರು.

‘ಮಾಜಿ ಸಿಎಂ ಎಂದು ಸುಮ್ಮನಿದ್ದೇನೆ’
ಶಿವಮೊಗ್ಗ
: ‘ನನಗೂ ಸಿದ್ದರಾಮಯ್ಯ ವಿರುದ್ಧ ಕೆಟ್ಟ ಭಾಷೆ ಬಳಸುವುದು ಗೊತ್ತಿದೆ. ಆದರೆ, ಮಾಜಿ ಮುಖ್ಯಮಂತ್ರಿ ಎಂದು ಸುಮ್ಮನಿದ್ದು, ಈ ಗೌರವವನ್ನು ಅವರು ಕಾಪಾಡಿಕೊಳ್ಳಬೇಕು‘ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯಿಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಬಳಸುತ್ತಿರುವ ಭಾಷೆ ಸರಿಯಿಲ್ಲ. ಆದರೆ, ಮೋದಿ ಹಾಗೂ ಯಡಿಯೂರಪ್ಪನವರ ಬಗ್ಗೆ ವೈಯಕ್ತಿಕ ಟೀಕೆ ಸರಿಯಲ್ಲ. ನರೇಂದ್ರ ಮೋದಿ ಅವರನ್ನು ಕುರಿತು ಕೋಮುವಾದಿ, ಕೊಲೆಗಡುಕ, ಸುಳ್ಳಿನ ಸರದಾರ ಎಂದು ಸಿದ್ಧರಾಮಯ್ಯ ಹಗುರವಾದ ಪದ ಬಳಕೆ ಮಾಡುತ್ತಿದ್ದಾರೆ’ ಇದು ಸರಿಯಲ್ಲ ಎಂದರು.

Post Comments (+)