ಸೋಮವಾರ, ಅಕ್ಟೋಬರ್ 21, 2019
24 °C

ಆರ್ಥಿಕವಾಗಿ, ಬೌದ್ಧಿಕವಾಗಿ ದಿವಾಳಿಯಾಗಿದೆ ಸರ್ಕಾರ: ಸಿದ್ದರಾಮಯ್ಯ ಕಟುಟೀಕೆ

Published:
Updated:
Siddaramaiah

ಪರಿಹಾರ ತರಲು ವಿಫಲವಾಗಿರುವ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಗ್ಯತೆಯ ಬಗ್ಗೆಯೂ ಪ್ರಸ್ತಾಪಿಸಿ ಟ್ವಿಟರ್‌ನಲ್ಲಿ ತಿವಿದಿದ್ದಾರೆ.

‘ನೆರೆ ಸಂತ್ರಸ್ತರಿಗೆ ಪರಿಹಾರ ಕೊಡುವ ಯೋಗ್ಯತೆ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಇಲ್ಲ. ನ್ಯಾಯಬದ್ಧ ಪರಿಹಾರ ಕೇಳಿ ವರದಿ ಸಲ್ಲಿಸುವ ಯೋಗ್ಯತೆ ನಿಮಗೂ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಆರ್ಥಿಕವಾಗಿ ಮಾತ್ರವಲ್ಲ, ಬೌದ್ಧಿಕವಾಗಿಯೂ ನಿಮ್ಮ ಸರ್ಕಾರ ದಿವಾಳಿಯಾಗಿದೆ. ನಿಮ್ಮ ಜಗಳದಲ್ಲಿ ಕರ್ನಾಟಕವನ್ನು ಏಕೆ ಬಲಿ ಕೊಡುತ್ತೀರಿ’ ಎಂದು ಪ್ರಶ್ನಿಸಿದ್ದಾರೆ.

ಯಡಿಯೂರಪ್ಪ ಪರ ಸಹಾನುಭೂತಿ

ಸಿದ್ದರಾಮಯ್ಯ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಸುದರ್ಶನ್ ಜಯರಾಮು ಎನ್ನುವವರು, ಯಡಿಯೂರಪ್ಪ ಅವರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ.

‘ಅಪ್ಪ ಅಮ್ಮ ಜಗಳದಲಿ ಕೂಸು ಬಡವಾಯಿತು’ ಅನ್ನುವ ಹಾಗೆ, ಹೋದ ಸಲ ಅಧಿಕಾರಕ್ಕೆ ಬಂದಾಗಲೂ 
ಯಡಿಯೂರಪ್ಪ ಅವರಿಗೆ ನೆಮ್ಮದಿಯಾಗಿ ಆಡಳಿತ ನಡೆಸಲು ಅವರ ಪಕ್ಷದ ಬಣಗಳೇ ಬಿಡಲಿಲ್ಲ. ರಾಜ್ಯದ ಜನತೆ ಬವಣೆಯನ್ನು ಅನುಭವಿಸುವಂತಾಯಿತು. ಈಗ ಮತ್ತದೇ ಕಥೆಯು ಪುನಾರವರ್ತನೆಯಾಗುತ್ತಿದೆ. 
ಆಡಳಿತ ನಡೆಸುವದಕ್ಕಿಂತ ಅವರು ಗೊಂದಲಕಾರಿ ಹೇಳಿಕೆಗಳಲ್ಲಿ ಮುಳುಗಿದ್ದಾರೆ’ ಎಂದು ಯಡಿಯೂರಪ್ಪ ಅವರನ್ನು ಸಮರ್ಥಿಸಿಕೊಳ್ಳುವ ಪ್ರಯತ್ನದ ಜೊತೆಜೊತೆಗೆ ಬಿಜೆಪಿಯನ್ನೂ ಟೀಕಿಸಿದ್ದಾರೆ.

Post Comments (+)