‘ನಾನಂತೂ ಕೂಲ್ ಆಗಿಯೇ ಇದ್ದೇನೆ’ –ಸಿಎಂ: ‘ನಾವೂ ಕುಸ್ತಿ ಆಡಿದವರು’ –ಮಾಜಿ ಸಿಎಂ

7
ಬಿಜೆಪಿಯ ಆಪರೇಷನ್ ಕಮಲಕ್ಕೆ ಕುಮಾರಸ್ವಾಮಿ, ಸಿದ್ದರಾಮಯ್ಯ ಪ್ರತಿಕ್ರಿಯೆ

‘ನಾನಂತೂ ಕೂಲ್ ಆಗಿಯೇ ಇದ್ದೇನೆ’ –ಸಿಎಂ: ‘ನಾವೂ ಕುಸ್ತಿ ಆಡಿದವರು’ –ಮಾಜಿ ಸಿಎಂ

Published:
Updated:

ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಯಾವುದೇ ಸಮಸ್ಯೆ ಆಗಿಲ್ಲ. ನಾನಂತೂ ಕೂಲ್ ಆಗಿಯೇ ಇದ್ದೇನೆ. ಕೂಲ್ ಆಗಿದ್ದೀನಿ ಅಂದ್ಮೇಲೆ ಏನಾಗ್ತಿದೆ ಅಂತ ನೀವೇ ಅರ್ಥ ಮಾಡಿಕೊಳ್ಳಿ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರನ್ನ ರೆಸಾರ್ಟ್‌ಗೆ ಶಿಫ್ಟ್‌ ಮಾಡುತ್ತಿಲ್ಲ. ರೆಸಾರ್ಟ್‌ಗೆ ಶಿಫ್ಟ್ ಮಾಡುವ ಅವಶ್ಯಕತೆ ನಮಗೆ ಇಲ್ಲ. ನಮ್ಮ ಸರ್ಕಾರ ಸುಭದ್ರವಾಗಿದೆ. ಮಾಧ್ಯಮಗಳು ಸರ್ಕಾರ ಬೀಳುತ್ತದೆ ಎಂದು ಸುದ್ದಿ ಮಾಡುತ್ತಿವೆ ಎಂದು ಆರೋಪಿಸಿದರು.

ಮೈತ್ರಿ ಸರ್ಕಾರ ಸುಭದ್ರವಾಗಿದೆ. ಅತೃಪ್ತ ಶಾಸಕರು ನಿಮಗೆ ನಾಟ್‌ರೀಚೆಬಲ್‌ ಆಗಿರಬಹುದು. ಆದರೆ, ರಮೇಶ್ ಜಾರಕಿಹೊಳಿ, ನಾಗೇಂದ್ರ ಸೇರಿದಂತೆ ಎಲ್ಲರೂ ನನ್ನ ಸಂಪರ್ಕದಲ್ಲಿದ್ದಾರೆ. ಮೂರು ದಿನಗಳಿಂದ ಎಲ್ಲರ ಜೊತೆ ನಾನು ಮಾತಾನಾಡಿದ್ದೇನೆ. ಜೆಡಿಎಸ್‌ನಿಂದ ಆಪರೇಷನ್‌ ಮಾಡುವ ಅವಶ್ಯಕತೆ ಇಲ್ಲ. ಎಲ್ಲದ್ದಕ್ಕೂ ಸೂಕ್ತ ಸಮಯ ಬರಬೇಕು ಎಂದರು.

ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರು ನಾಯಕರೊಂದಿಗೆ ತಡರಾತ್ರಿಯವರೆಗೂ ಸಭೆ ನಡೆಸಿದ್ದಾರೆ.

ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ನಾಯಕರ ಜತೆ ಬುಧವಾರ ಮತ್ತೆ ಸರಣಿ ಸಭೆಗಳನ್ನು ನಡೆಸುತ್ತಿದ್ದು, ಆಪರೇಷನ್ ಕಮಲದ ಎಲ್ಲ ಮಾಹಿತಿ ಪಡೆಯುತ್ತಿದ್ದಾರೆ.

ಬುಧವಾರ ಆರು ಜನ ಶಾಸಕರು ರಾಜೀನಾಮೆ ನೀಡುವ ವದಂತಿ ಹಬ್ಬಿರುವುದರಿಂದ, ಒಂದು ವೇಳೆ ಅಂತಹ ಸಂದರ್ಭ ನಿರ್ಮಾಣವಾದರೆ ಏನು ಮಾಡಬೇಕೆಂಬ ಕುರಿತು ಗಂಭೀರವಾಗಿ ಚರ್ಚೆ ನಡೆಯುತ್ತಿದೆ.

ಮುಂಬೈನಲ್ಲಿರುವ ಅತೃಪ್ತ ಶಾಸಕರನ್ನು ಸಂಪರ್ಕಿಸಲು ಕೈ ನಾಯಕರು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ.

‘... ನಾವೂ ಕುಸ್ತಿ ಆಡಿದವರು’: ಸಿದ್ದರಾಮಯ್ಯ ಟ್ವೀಟ್‌

‘ರಾಜ್ಯದ ಕೆಲವು ಬಿಜೆಪಿ‌ ಶಾಸಕರು ಕೂಡಾ ನಮ್ಮ ಸಂಪರ್ಕದಲ್ಲಿದ್ದಾರೆ. ನಾವೇನು ಕೈಕಟ್ಟಿ ಕೂತಿಲ್ಲ.‌ ರಾಜಕೀಯದ ಅಖಾಡದಲ್ಲಿ‌ ನಾವೂ ಕುಸ್ತಿ ಆಡಿದವರು, ಪಟ್ಟುಗಳು ನಮಗೂ ಗೊತ್ತು’ ಎಂದು ಬಿಜೆಪಿಯ ಆಪರೇಷನ್ ಕಮಲ ವಿಚಾರದ ಬಗ್ಗೆ ಸಿದ್ದರಾಮಯ್ಯ ಖಾರವಾಗಿಯೇ ಟ್ವೀಟ್ ಮಾಡಿದ್ದಾರೆ.

ರಾಜ್ಯದ ಕೆಲವು ಬಿಜೆಪಿ‌ ಶಾಸಕರು ಕೂಡಾ ನಮ್ಮ ಸಂಪರ್ಕದಲ್ಲಿದ್ದಾರೆ. ನಾವೇನು ಕೈಕಟ್ಟಿ ಕೂತಿಲ್ಲ.‌ ರಾಜಕೀಯದ ಅಖಾಡದಲ್ಲಿ‌ ನಾವೂ ಕುಸ್ತಿ ಆಡಿದವರು, ಪಟ್ಟುಗಳು ನಮಗೂ ಗೊತ್ತು.@INCKarnataka

— Siddaramaiah (@siddaramaiah) January 15, 2019

ಬರಹ ಇಷ್ಟವಾಯಿತೆ?

 • 18

  Happy
 • 3

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !